ಮಧುರ ಸಂಜೆಯು


ಮಧುರ ಸಂಜೆಯು


ಬಹಳ ದಿನಗಳಾದ ಮೇಲಿಂದು
ಈ ಮಧುರ ಸಂಜೆಯು ನನಗೀಗ
ಒಂಟಿಯಾಗಿ ಸಿಕ್ಕಿದೆಯಲ್ಲ
ಆದರೆ ನಾನೇನು  ಮಾಡಲಿ
ನನ್ನ ಜೊತೆಯಲ್ಲಿಯೇ ನೀನಿಲ್ಲವಲ್ಲ..

ಗಿಡಗಳೆಲ್ಲ ಒಲವ ಭಾವದಿಂದು
ಚಾಚಿ ಬಾಹುಗಳನು ನಿಂತಿವೆಯಲ್ಲ
ಹಕ್ಕಿಗಳೆಲ್ಲ ಒಲುಮೆಯಿಂದಲೇ ಸಂತಸದಿಂದು
ಹಿಂತಿರುಗಿ ಮನೆಗೆ ಹೊರಟು ನಿಂತಿವೆಯಲ್ಲ
ಆದರೆ ನಾನೇನು ಮಾಡಲಿ
ನನ್ನ ಜೊತೆಯಲ್ಲಿಯೇ ನೀನಿಲ್ಲವಲ್ಲ...

ಬಹಳ ದಿನಗಳಾದ ಮೇಲಿಂದು
ಈ ಮಧುರ ಸಂಜೆಯು ನನಗೀಗ
ಒಂಟಿಯಾಗಿ ಸಿಕ್ಕಿದೆಯಲ್ಲ.
ಆದರೆ ನಾನೇನು ಮಾಡಲಿ
ನನ್ನ ಜೊತೆಯಲ್ಲಿಯೇ ನೀನಿಲ್ಲವಲ್ಲ...

ಬುಲ್ ಬುಲ್ ಹಕ್ಕಿಯ ಹೃದಯದೊಳಗಿಂದು
ಚಿಂವ್ ಚಿಂವ್ ಎಂಬ ಐಕ್ಯತೆಯ ಧ್ವನಿ ಕೇಳುತ್ತಿದೆಯಲ್ಲ.
ಗೂಡಿನಿಂದ ಗೂಡಿಗೆ ನೆಗೆದು ಹಾರಿ
ಹೊಸಮನೆಯ ಹಂದರ ಹೆಣೆದು ಕುಣಿಯುತ್ತಿದೆಯಲ್ಲ..
ಆದರೆ ನಾನೇನು ಮಾಡಲಿ
ನನ್ನ ಜೊತೆಯಲ್ಲಿಯೇ ನೀನಿಲ್ಲವಲ್ಲ....

ಬಹಳ ದಿನಗಳಾದ ಮೇಲಿಂದು
ಈ ಮಧುರ ಸಂಜೆಯು ನನಗೀಗ
ಒಂಟಿಯಾಗಿ ಸಿಕ್ಕಿದೆಯಲ್ಲ.
ಆದರೆ ನಾನೇನು ಮಾಡಲಿ
ನನ್ನ ಜೊತೆಯಲ್ಲಿಯೇ ನೀನಿಲ್ಲವಲ್ಲ...

ಜುಳುಜುಳು ಎನುತಲಿ ಕಲರವದಿ ನಿರ್ಝರೆಯಿಂದು
ಉಲ್ಲಾಸ ಗೀತೆ ಹಾಡುತಲೇ ಹರಿಯುತಿಹಳಲ್ಲ.
ಹೇಗೆಂದರೆ ನನ್ನ ಕಳೆದ ದಿನಗಳೆಲ್ಲವೂ
ಹರುಷದಿ ಕುಣಿದು, ಕುಪ್ಪಳಿಸಿ ನಕ್ಕಂತೆ ಎಲ್ಲ...
ಆದರೆ ನಾನೇನು ಮಾಡಲಿ
ನೀನೀಗ ನನ್ನ ಜೊತೆಯಲ್ಲಿಯೇ ಇಲ್ಲವಲ್ಲ.

ಬಹಳ ದಿನಗಳಾದ ಮೇಲಿಂದು
ಈ ಮಧುರ ಸಂಜೆಯು ನನಗೀಗ
ಒಂಟಿಯಾಗಿ ಸಿಕ್ಕಿದೆಯಲ್ಲ.
ಆದರೆ ನಾನೇನು ಮಾಡಲಿ
ನನ್ನ ಜೊತೆಯಲ್ಲಿಯೇ ನೀನಿಲ್ಲವಲ್ಲ...

ಕನಸು ಕಂಗಳ ಚೆಲುವೆ
ಮಧುರ ಸಂಜೆಯು ಮಧುರ ಸಂಜೆಯು Reviewed by ಕನಸು ಕಂಗಳ ಚೆಲುವೆ on March 26, 2019 Rating: 5

11 comments:

Contact For Website Designing - Low Rates
Mob: 9448841652
Powered by Blogger.