" ಮೌನವೂ ಪಿಸುಗುಟ್ಟಿದಾಗ " ನನ್ನ ಕಾವ್ಯ ಸಂಕಲನದಿಂದ ಒಂದು ಕವಿತೆ ನಿಮ್ಮಲ್ಲರ ಓದಿಗಾಗಿ
' ನನ್ನಲಿ '
ನಿನ್ನ ಗುಂಗಿನಲಿ
ಮಿಂದೆದ್ದ ಭಾವಗಳು
ಉಸಿರಿವೆ ನಿನ್ನೊಲವ
ನನ್ನೆದುರಲಿ
ನಿನ್ನ ಲಹರಿಯಲಿ
ಬರೆದ ಸಾಲುಗಳು
ಸಾಗಿವೆ ನಿನ್ನ ಸಮೀಪ
ಗಡಿಬಿಡಿಯಲಿ
ನನ್ನ ಕವಿತೆಯಲಿ
ಪಿಸುಗುಟ್ಟುವ ಶಬ್ದಗಳು
ಹಾಡಿವೆ ನಿನ್ನ ಪ್ರೇಮ
ಅನುರಾಗದಲಿ
ಕನಸು ಕಂಗಳ ಚೆಲುವೆ
Kanasukangalcheluve
ನನ್ನಲಿ
Reviewed by ಕನಸು ಕಂಗಳ ಚೆಲುವೆ
on
May 23, 2025
Rating:
No comments: