ಹಾಜರಿದ್ದ ಗೂಡಲಿ
ಬಾನಂಚಿನ ನಸುಗೆಂಪಿನಲಿ
ಹಕ್ಕಿಯ ನಲಿದಾಟ,
ಭಾವನೆಯ ಚಿಮ್ಮುತಲಿ
ದೂರ ತೀರಕ್ಕೆ ಹಾರಾಟ...
ಇಳಿಹೊತ್ತಿನಲಿ
ಅಲೆಗಳ ಸುತ್ತ ತಿರಗಾಟ,
ನಲ್ಲನಾಗಮನದ ಹರುಷದಲಿ
ಗುನುಗುನಿಸುತ್ತ ರೆಕ್ಕೆಗಳ ಬಡಿದಾಟ..
ಏರಿದ ಎದೆಬಡಿತದಲಿ
ಭಾವನೆಗಳ ಗುದ್ದಾಟ,
ಪ್ರಿಯನ ಕಾಣುವ ತವಕದಲಿ
ಅಲೆಗಳೊಂದಿಗೆ ಮುಟ್ಟಾಟ...
ಸರಸರನೆ ರಭಸದಲಿ
ದಡದಲ್ಲಿ ಅಲೆಗಳ ಜಿಗಿದಾಟ,
ಜೋಡಿ ಹಕ್ಕಿಗಳೆದೆಯಲಿ
ಬಯಕೆಗಳ ಕುಣಿದಾಟ....
ಹಾಜರಿದ್ದ ನನ್ನೆದೆಯಗೂಡಲಿ
ನೆನಪುಗಳ ಕಾಟ,
ಹನಿ ಚಿಮ್ಮಿ ಕಣ್ಣಂಚಲಿ
ಮೂಡಿತೊಂದು ಕವನ ಪಟಪಟ.....
ಕನಸು ಕಂಗಳ ಚೆಲುವೆ
ಬಾನಂಚಿನ ನಸುಗೆಂಪಿನಲಿ
ಹಕ್ಕಿಯ ನಲಿದಾಟ,
ಭಾವನೆಯ ಚಿಮ್ಮುತಲಿ
ದೂರ ತೀರಕ್ಕೆ ಹಾರಾಟ...
ಇಳಿಹೊತ್ತಿನಲಿ
ಅಲೆಗಳ ಸುತ್ತ ತಿರಗಾಟ,
ನಲ್ಲನಾಗಮನದ ಹರುಷದಲಿ
ಗುನುಗುನಿಸುತ್ತ ರೆಕ್ಕೆಗಳ ಬಡಿದಾಟ..
ಏರಿದ ಎದೆಬಡಿತದಲಿ
ಭಾವನೆಗಳ ಗುದ್ದಾಟ,
ಪ್ರಿಯನ ಕಾಣುವ ತವಕದಲಿ
ಅಲೆಗಳೊಂದಿಗೆ ಮುಟ್ಟಾಟ...
ಸರಸರನೆ ರಭಸದಲಿ
ದಡದಲ್ಲಿ ಅಲೆಗಳ ಜಿಗಿದಾಟ,
ಜೋಡಿ ಹಕ್ಕಿಗಳೆದೆಯಲಿ
ಬಯಕೆಗಳ ಕುಣಿದಾಟ....
ಹಾಜರಿದ್ದ ನನ್ನೆದೆಯಗೂಡಲಿ
ನೆನಪುಗಳ ಕಾಟ,
ಹನಿ ಚಿಮ್ಮಿ ಕಣ್ಣಂಚಲಿ
ಮೂಡಿತೊಂದು ಕವನ ಪಟಪಟ.....
ಕನಸು ಕಂಗಳ ಚೆಲುವೆ
ಹಾಜರಿದ್ದ ಗೂಡಲಿ
Reviewed by ಕನಸು ಕಂಗಳ ಚೆಲುವೆ
on
April 01, 2019
Rating:
No comments: