ಎನ್ನೆದೆಯ ಕನಸಿನ ಹಾದಿ ಮೇಲೆ
ಸಂಜೆಕಿರಣಗಳ ಕಚಗುಳಿಗೆ
ನಾಚಿ ರವಿ ಕೆಂಪಾದಾಗ
ಹಕ್ಕಿಗಳ ಸಾಲು ನೋಡದೋ
ಮರಳುವುದು ಗೂಡಿಗೆ...
ಬಾನಿನ ಬಯಲಲಿ
ಚಿತ್ತಾರ ಮೂಡಿದಾಗ
ಖುಷಿಯ ಶೃಂಗಾರ ನೋಡದೋ
ಹರಡುವುದು ಪ್ರೇಮ ಮನಕೆ....
ಹೃದಯ ಪರದೆಯೊಳು
ರವಿ ನಿನ್ನ ನೆನಪಾದಾಗ
ಕನಸುಗಳ ಸಾಲು ನೋಡದೋ
ಲಗ್ಗೆ ಇಡುವುದು ಎನ್ನೊಳಗೆ...
ಕನಸಲಿ ಕಾಡಿದ ಹುಡುಗ
ಅಪ್ಪಣೆ ಇಲ್ಲದೆ ನುಗ್ಗಿದಾಗ
ಹೊರಟಿದೆ ದಿಬ್ಬಣ ನೋಡದೋ
ಎನ್ನೆದೆಯ ಕನಸಿನ ಹಾದಿ ಮೇಲೆ...
ಕನಸು ಕಂಗಳ ಚೆಲುವೆ
ಸಂಜೆಕಿರಣಗಳ ಕಚಗುಳಿಗೆ
ನಾಚಿ ರವಿ ಕೆಂಪಾದಾಗ
ಹಕ್ಕಿಗಳ ಸಾಲು ನೋಡದೋ
ಮರಳುವುದು ಗೂಡಿಗೆ...
ಬಾನಿನ ಬಯಲಲಿ
ಚಿತ್ತಾರ ಮೂಡಿದಾಗ
ಖುಷಿಯ ಶೃಂಗಾರ ನೋಡದೋ
ಹರಡುವುದು ಪ್ರೇಮ ಮನಕೆ....
ಹೃದಯ ಪರದೆಯೊಳು
ರವಿ ನಿನ್ನ ನೆನಪಾದಾಗ
ಕನಸುಗಳ ಸಾಲು ನೋಡದೋ
ಲಗ್ಗೆ ಇಡುವುದು ಎನ್ನೊಳಗೆ...
ಕನಸಲಿ ಕಾಡಿದ ಹುಡುಗ
ಅಪ್ಪಣೆ ಇಲ್ಲದೆ ನುಗ್ಗಿದಾಗ
ಹೊರಟಿದೆ ದಿಬ್ಬಣ ನೋಡದೋ
ಎನ್ನೆದೆಯ ಕನಸಿನ ಹಾದಿ ಮೇಲೆ...
ಕನಸು ಕಂಗಳ ಚೆಲುವೆ
ಎನ್ನೆದೆಯ ಕನಸಿನ ಹಾದಿ ಮೇಲೆ
Reviewed by ಕನಸು ಕಂಗಳ ಚೆಲುವೆ
on
April 21, 2019
Rating:
No comments: