ಇರವು



ಇರವು

ನಗುನಗುತಲೇ ಭಾಸ್ಕರ 
ಹೊನ್ನ ರಥವೇರಿ ಬಂದ
ನಿನ್ನ ಇರುವಿಕೆಯ ಅರಿವು 
ನನ್ನೆದೆಯಲಿ ಹರುಷ ಮೂಡಿಸಿ ನಿಂತ....

ಹೇಳಬೇಕಿತ್ತು ಬಹಳಷ್ಟು
ನನ್ನ ಗೂಡೊಳಗಿನ ತಲ್ಲಣದ ಮಾತ
ನಿನ್ನೆದುರಲಿ ಅದೇಕೋ ಪದಗಳೆಲ್ಲಾ 
ಮೌನ ಚಳುವಳಿಗೆ ನಿಂತಂತೆ ಸ್ತಬ್ಧ...

ಮತ್ತೆ ಮತ್ತೆ ನಾನೇಕೆ ನೆನಪಿಸಲಿ ?
ಕೊಟ್ಟೆ  ನಿನಗೂ  ಬಳುವಳಿ ಸ್ವಲ್ಪ 
ಸುತ್ತೆಲ್ಲ ಮನಸ್ಸು ಕಳೆದುಕೊಂಡವರೇ ಈಗ
ಹಲುಬಿದ ಕ್ಷಣಗಳ ವರ್ಣನೆ ಕೊಡಲು ಸಾಧ್ಯವಿಲ್ಲ..............

- ಕನಸು ಕಂಗಳ ಚೆಲುವೆ


ಇರವು ಇರವು Reviewed by ಕನಸು ಕಂಗಳ ಚೆಲುವೆ on April 29, 2018 Rating: 5

No comments:

Contact For Website Designing - Low Rates
Mob: 9448841652
Powered by Blogger.