ನನ್ನೆದೆಯ ಹಾಡಿನೊಳಗೆ


ನನ್ನೆದೆಯ ಹಾಡಿನೊಳಗೆ


ಹೀಗೊಂದು ಆಶಯವಿದೆ ಎದೆಯ ಬಯಲೊಳಗೆ
ಹೀಗೊಂದು ಆಹ್ವಾನವಿದೆ ನನ್ನೆದೆಯ ಹಾಡಿನೊಳಗೆ ..

             ಬೆಳಗುವ ಹಣತೆ ಒಂದೇ ಸಾಕು
             ಬೇರೂರಿದ ಜಗದ ಕತ್ತಲೆ ಓಡಿಸಲು
             ಕಿತ್ತೆಸೆಯಲೇ ಬೇಕಾಗಿದೆ ಮೌಢವೆಂಬ ಬೇರು
             ಬೆಳೆಸಬೇಕು ಹೊಸಜ್ಙಾನದ ಹಸಿರಿನ ಚಿಗುರು ..

ಧ್ವೇಷಭಾವದ ಕತ್ತಲೆಯ ಪುಟದ ಮೇಲೆ
ಪ್ರೇಮ ಹಾಡು ಜ್ಞಾನ ಮಸಿಯಿಂದ ಬರೆಯೋಣವೇ
ನಾನು-ನೀನು ಹೊಲೆಯ ಮಾದಿಗನಿಗು
ಶ್ವೇತವರ್ಣದ ಬೆಳಕಿನ ಪುಂಜ ಒಂದೆಯಿಹುದು....


              ಭಿನ್ನ ಭಾಷೆಯಾದರೇನು? ಹೃದಯ ದಿವಿಗೆ ಒಂದವು
              ಅಳಿಸಲಿ ಎಲ್ಲರೆದೆಯ ಸಂತಾಪ, ಒಲವ ದೀಪವು
              ಮೂಡಿಬರಲಿ ಸ್ನೇಹಕ್ಕೊಂದು ಹೊಸರೂಪವು
              ಮರೆಯಲಿ ಮನವು ಕೋಪ ತಾಪ ನೋವೆಲ್ಲವು......

ದೂರಾಗದಿರಲಿ ಗೆಳೆಯರೇ ಆತ್ಮವಿಶ್ವಾಸವು
ನೆನಪಿರಲಿ ಮನುಜರೆಲ್ಲ ಒಂದೆಂಬ ಭಾವವು
ನಿಲ್ಲುವವರೆಗೆ ಗೂಡೊಳಗಿನ ಉಸಿರವು
ಹಂಚುವ ನಡೆ ಎಲ್ಲರಿಗೂ ಜ್ಞಾನಬೆಂಬ ದಾಹವು.....

               ಬೇಡಿಕೆಯಿದೆ ಪರಮಾತ್ಮ ನೀ ಕೊಡುವುದಾದರೆ ಬದುಕು
                ಒಗ್ಗಟ್ಟಿನ ದಾರದಲಿ ಬೆಸೆದ ಸಂಸ್ಕೃತಿಯಲಿ ಒಡಕು ಸಾಕು
                ಸೀತೆ ಜಗನ್ಮಾತೆಯರನು ಪೂಜಿಸಿದ ಮನಗಳಿಗೇಕೆ
                ಅಬಲೆ ನಾರಿಯರ ಸೀರೆ ಎಳೆಯುವ ಕೈಗಳ ಕೊಟ್ಟೆ?

ಸಂಸ್ಕೃತಿ ಮೆಚ್ಚಿ ಪ್ರೀತಿಸುತ್ತಿರುವಾಗ ಈಡೀ ವಿಶ್ವವೇ
ಅಜ್ಞಾನಿಗಳಾಗಿ ತೋರಲು ನಾಚಿಕೆ ಬರುವುದಿಲ್ಲವೆ ?
ದೀಪಾವಳಿಯ ಬೆಳಕಿನ ಸಾಲುಸಾಲು ದೀಪಗಳೇ
ಅಳಿಸಿ ಹಾಕಿರಿ ಅತ್ಯಾಚಾರಿಗಳ ಅಟ್ಟಹಾಸದ ನಗುವೇ ...

                ಹೀಗೊಂದು ಆಶಯವಿದೆ ಎದಯ ಬಯಲೊಳಗೆ
               ಹೀಗೊಂದು ಆಹ್ವಾನವಿದೆ ನನ್ನೆದೆಯ ಹಾಡಿನೊಳಗೆ.....


- ಪ್ರೇಮಾ ನಡುವಿನಮನಿ
ಧಾರವಾಡ 


(ಯಾರೂ ನಕಲು ಮಾಡಬೇಡಿ ಇದು ನಾನು ಬರೆದ ಕವನ ದೀಪಾವಳಿ ಆಶಯದೊಂದಿಗೆ )
ನನ್ನೆದೆಯ ಹಾಡಿನೊಳಗೆ ನನ್ನೆದೆಯ ಹಾಡಿನೊಳಗೆ Reviewed by ಕನಸು ಕಂಗಳ ಚೆಲುವೆ on November 07, 2017 Rating: 5

No comments:

Contact For Website Designing - Low Rates
Mob: 9448841652
Powered by Blogger.