ಅವಳ ಬಣ್ಣ


ಅವಳ ಬಣ್ಣ

ಗಿರಾಕಿ ತನ್ನೆಡೆಗೆ ಸೆಳೆಯಲು
ಈಕೆಯ ಹರ ಸಾಹಸ ನೋಡು
ಹಚ್ಚುತ್ತಾಳೆ ತುಟಿಗೆ ಬಣ್ಣ ಕೆಂಪು
ಆಸೆ ತುಂಬಿದ ಕಣ್ಣಿಗೆ ಕಪ್ಪು
ಸಾಲಿನಲಿ ನಿಂತು ಹೋಗಿದ್ದಾಳೆ ಬೆಸತ್ತು
ಗಿರಾಕಿಗಳು ಸನಿಹ ಬಂದು ನಿಂತnು
ಸರಿಸಿದರು ಎದೆಯ ಮೇಲನ ಸೆರಗು
ತುಂಬಿಕೊಂಡರು ಕಣ್ಣು ,ಕೇವಲ ಉಬ್ಬು ತಗ್ಗು
ಅವಳ ಆಸೆ ಅವರಿಗೇಕೆ ಬೇಕಿತ್ತು ?
ಮನಸಿಗೆ ಬಂದಂತೆ ಅವಳ ಮೇಲೆ ಹಿಡಿತವಿತ್ತು
ಈಗ ತುಟಿಯ ಬಣ್ಣವೂ ಮಾಸಿತ್ತು
ಕಣ್ಣಿನ ಕಾಡಿಗೆಯೂ ಸಣ್ಣಗೆ ಬೆವತಿತ್ತು
ಅವರ ಉಸಿರಿನ ಏರಿಳಿತ ಕೇಳಿಸಿತ್ತು
ಕಲ್ಲಂತೆ ಅವಳು ಸುಮ್ಮನೆ , ಹಾಸಿಗೆ ಅಣಿಕಿಸಿತ್ತು
ಹಸಿದವರು ಹಿಂಗಿಸಿಕೊಂಡರು ಹಸಿವು ಹಪಹಪವಿತ್ತು
ಅವಳ ಸತ್ತ ಭಾವಗಳು ಚಿಂತಿಸಿದವು ಮತ್ತೂ
ಇನ್ನೊಬ್ಬ ನ ಬರುವಿಗೆ ಬಣ್ಣ ಹಚ್ಚಬೇಕಲ್ಲ ಮತ್ತು !
ಸರಸರನೇ ಸರಿಪಡಿಸಿ ತಲೆಗೂದಲು ಎದ್ದಳು
ನೋಟುಗಳ ಮೇಲೆ ಮಾತ್ರ ಕಣ್ಣಿತ್ತು
ಹೊಟ್ಟೆಯ ಮುಟ್ಟಿ ಮುಖ ಕಿವುಚಿದಳು
ಹೊಟ್ಟೆನೋವು ಮತ್ತೂ ಹೆಚ್ಚಾಗಿತ್ತು
ಹಿಂಬದಿಯಲಿ ನೋಟು ನಕ್ಕಿತು
ಹಾಸಿಗೆಯ ಬದಿಯಲಿ ಮಗು ಅಳುತ್ತಿತ್ತು
ಮಗುವಿನ ಅಳುವ ದನಿ ಕೇಳಲಿಲ್ಲ ಬಂದವರು
ಅವಳಿಗೂ ಕೇಳಿಸಲಿಲ್ಲ , ಸುಮ್ಮನಾಯಿತದು ಅತ್ತು
ಮತ್ತೆ ಹೊರಹೋದಳು ಬಾಗಿಲೊಳು ನಿಂತಳು
ತುಟಿಯ ಬಣ್ಣ ಮತ್ತೊಮ್ಮೆ ಮಿಂಚಿತ್ತು....


- ಕನಸು ಕಂಗಳ ಚೆಲುವೆ
ಪ್ರೇಮಾ ನಡುವಿನಮನಿ
ಧಾರವಾಡ 

ಅವಳ ಬಣ್ಣ ಅವಳ ಬಣ್ಣ Reviewed by ಕನಸು ಕಂಗಳ ಚೆಲುವೆ on November 07, 2017 Rating: 5

2 comments:

Contact For Website Designing - Low Rates
Mob: 9448841652
Powered by Blogger.