ಧಾರವಾಡ: ಸಿನಿಮಾ ಸಾಂಸ್ಕøತಿಕ ಕ್ಷೇತ್ರವಲ್ಲ. ಅದೊಂದು ಪಕ್ಕಾ ಉದ್ಯಮ. ಸಿನಿಮಾಗೆ ಹಾಡು ಬರೆಯುವವರನ್ನು ದೊಡ್ಡ ಸಾಹಿತಿಗಳೆಂಬಂತೆ ಬಿಂಬಿಸ್ತಿದಾರೆ ಇದು ನಮ್ಮ ಸಾಂಸ್ಕøತಿಕ ಲೋಕದ ಕಳವಳಕಾರಿ ಸಂಗತಿ ಎಂದು ಹೊಸತು ಪತ್ರಿಕೆಯ ಸಂಪಾದಕ ಸಿದ್ದನಗೌಡ ಪಾಟೀಲ ಅಭಿಪ್ರಾಯಪಟ್ಟರು.
ರಂಗಾಯಣ ಸಾಂಸ್ಕøತಿಕ ಸಮುಚ್ಚಯದಲ್ಲಿ ಕ್ರಾಂತಿ ಪ್ರಕಾಶನ ಆಯೋಜಿಸಿದ್ದ ಸಾಹಿತ್ಯ-ಸಂಕ್ರಾಂತಿ ಕಾರ್ಯಕ್ರಮದಲ್ಲಿ ಲೇಖಕರಾದ ಸಿದ್ರಾಮ್ ಕಾರಣಿಕ್ ಅವರ ಕಥಾಸಂಕಲನ ನಮ್ಮೊಳಗಿನ ನಾವು, ಪ್ರೇಮಾ ನಡುವಿನಮನಿ ಅವರ ಕಂಬನಿ ಕಥಾಸಂಕಲನ ಕೃತಿಗಳನ್ನು ಹಾಗೂ ಕೆ.ಆರ್.ಸೌಮ್ಯ ಅವರ ಬೆಂಕಿಯಲ್ಲೂ ಬಾಡದ ಹೂ ಪುಸ್ತಕವನ್ನ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಿನಿಮಾ ಕ್ಷೇತ್ರದ ತಲ್ಲಣಗಳಿಂದ ಜೀವನುದ್ದಕ್ಕೂ ಹೋರಾಟ ಮಾಡುತ್ತಾ, ಬರೆಯುತ್ತಾ ಬರೆಯುವವರನ್ನು ನಿರ್ಲಕ್ಷಿಸಲಾಗುತ್ತಿದೆ. ಸಾರಸ್ವತಲೋಕವೂ ಕೂಡ ಸಿನಿಮಾದ ಪ್ರಭಾವವನ್ನು ಅರಿಯಲು ಎಲ್ಲೋ ಒಂದು ಕಡೆ ವಿಫಲವಾಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಸಾರ್ವಜನಿಕ ರಂಗದಲ್ಲಿ ನಡೆಯಬೇಕು. ಹಾಗಂತ ನಾನು ಸಿನಿಮಾ ವಿರೋಧಿಯಲ್ಲ. ಅದಕ್ಕೆ ತನ್ನದೆಯಾದ ಇತಿಮಿತಿಗಳು ಇವೆ ಎಂದರು.
ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ಕ್ರಾಂತಿ ಪ್ರಕಾಶನ ಬೇರೆ ಪ್ರಕಾಶನ ಸಂಸ್ಥೆಗಳ ರೀತಿ ಯೋಚಿಸದೇ ಹೊಸ ಬರಹಗಾರರಿಗೆ ಹಾಗೂ ಸಮಾಜಮುಖಿ ಪುಸ್ತಕಗಳನ್ನು ಕೊಡಲು ಹೆಚ್ಚೆಚ್ಚು ಶ್ರಮಿಸುತ್ತಿರುವುದು ಶ್ಲಾಘನೀಯ. ಲೇಖಕರಾದ ಸಿದ್ರಾಮ್ ಕಾರಣಿಕ್ ಅವರ ಕಥಾಸಂಕಲನ ನಮ್ಮೊಳಗಿನ ನಾವು, ಪ್ರೇಮಾ ನಡುವಿನಮನಿ ಅವರ ಕಂಬನಿ ಕಥಾಸಂಕಲನ ಓದುಗರ ಮನ ಮಿಡಿಯುವ ಕವನಗಳನ್ನು ಹೊಂದಿವೆ ಎಂದರು.
ಸಾಹಿತಿ ಸತೀಶ್ ಕುಲಕರ್ಣಿ, ಯುವ ಸಾಹಿತಿ ಸೋಮು ರೆಡ್ಡಿ, ಸಂಗಮೇಶ್ ಹಂಡಿಗಿ, ಇಂದುಮತಿ ಲಮಾಣಿ, ರಾಜೇಂದ್ರ ಪಾಟೀಲ, ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಕ್ರಾಂತಿ ಪ್ರಕಾಶನದ ಪ್ರಕಾಶಕ ಜಾಫರ್ ನದಾಪ್, ವಿರೇಶ ಹಂಡಿಗಿ, ಲೇಖಕಿ ಪ್ರಜ್ಞಾ ಮತ್ತಿಹಳ್ಳಿ, ಬಸವರಾಜ ಸೂಳಿಬಾವಿ ಉಪಸ್ಥಿತರಿದ್ದರು.
ಚರ್ಚೆಗಳು ಸಾರ್ವಜನಿಕ ರಂಗದಲ್ಲಿ ನಡೆಯಬೇಕು: ಪಾಟೀಲ
Reviewed by ಕನಸು ಕಂಗಳ ಚೆಲುವೆ
on
November 05, 2017
Rating:
Reviewed by ಕನಸು ಕಂಗಳ ಚೆಲುವೆ
on
November 05, 2017
Rating:

No comments: