ಪಶ್ಚಿಮ ಘಟ್ಟಗಳ ನಡುವೆ ಹಸಿರುಡಿಗೆಯುಟ್ಟ ಬೆಟ್ಟಗಳ ನಗುವ ಸಾಲಿನ ರಮ್ಯ ಮನೋಹರ ನೋಟ ನೋಡಬೇಕೆ ? ಹಾಗಿದ್ದರೆ ಒಂದು ಪಯಣ ಕಣಕುಂಬಿ ಎಂಬ ಒಂದು ಸಣ್ಣ ಹಳ್ಳಿಯತ್ತ.
ದಟ್ಟವಾದ ಕಾಡು , ಅಲ್ಲಲ್ಲಿ ವನ್ಯಜೀವಿಗಳಿವೆ ಎಚ್ಚರಿಕೆ, ಕಾಳಿಂಗ ಸರ್ಪಗಳ ತಾಣ ಎಂಬ ನಾಮ ಫಲಕ ಹೊತ್ತು ನಿಂತಿರುವ ಬೆಳಗಾವಿಯಿಂದ ಗೋವಾ ಹೋಗುವ ರಸ್ತೆಯಲ್ಲಿ
....ಜೊತೆಗೆ ಅಷ್ಟೇ ಸುಂದರ ಮನಮೋಹಕ ಹಸಿರಿನಿಂದ ಕೂಡಿದ ತಾಣ.ಅಲ್ಲಲ್ಲಿ ಲಹರಿಯಲಿ ಹರಿಯುವ, ಜಿಗಿಯುವ ಜಲಪಾತಗಳು ನಮ್ಮನ್ನು ಸೆಳೆಯುತ್ತವೆ.ಕಣಕುಂಬಿಯಲ್ಲಿ ಒಂದು ಪ್ರಾಚೀನ ದೇವಸ್ಥಾನ ಮೌಳಿ ಅಥವಾ ಮಹಾಲಕ್ಷ್ಮಿ ಎಂದು ಕರೆಯಲ್ಪಡುತ್ತದೆ. ಅದೇ ಮಲಪ್ರಭಾ ನದಿಯ ಉಗಮ ಸ್ಥಾನವಾಗಿದೆ. ಇಲ್ಲಿ ಹುಟ್ಟಿದ ಮಲಪ್ರಭಾ ನದಿ 400 ಕಿಲೋಮೀಟರ್ ಹರಿದು ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಕೃಷ್ಣಾ ನದಿಯಲ್ಲಿ ಲುಪ್ತವಾಗುತ್ತದೆ ಎಂದು ಜನ ಹೇಳುತ್ತಾರೆ.. ಇದರ ಜೊತೆಗೆ ರಾಮಲಿಂಗೇಶ್ವರ ದೇವಸ್ಥಾನ, ಒಂದು ಜಲಪಾತ ಚಿಗುಳೆ ಖಷಿಕೊಡುತ್ತದೆ......
ಇದರ ಪೂರ್ಣ ಮಾಹಿತಿ ನಂತರ ಬರೆಯುವೆ.....
ಈಗ ಇಷ್ಟೇ ಸಾಕು....
ಒಂದಿಷ್ಟು ಪೋಟೋ ಎಂಜಾಯ ಮಾಡಿ...
- ಕನಸು ಕಂಗಳ ಚೆಲುವೆ..
ವೀಕ್ ಎಂಡಲ್ಲಿ ಒಂದು ಜರ್ನಿ.......
Reviewed by ಕನಸು ಕಂಗಳ ಚೆಲುವೆ
on
November 03, 2017
Rating:
Reviewed by ಕನಸು ಕಂಗಳ ಚೆಲುವೆ
on
November 03, 2017
Rating:


No comments: