ಎರಡು ದಿನ ಮುಖಪುಸ್ತಕದಲ್ಲಿ ಯಾವುದೇ ಚಟುವಟಿಕೆ ಇಲ್ಲದೆ ನಾನು ಮೌನವಿದ್ದೆ....ಕಾರಣವಿಷ್ಟೇ ಕಾರವಾರ ಜಿಲ್ಲೆಯಲ್ಲಿ ಇರುವ ಕೈಗಾ ಅಣುವಿದ್ಯುತ್ ಸ್ಥಾವರದ ಎಂಪ್ಲಾಯಿಗಳಿಗಾಗಿ ಅಕ್ಟೋಬರ್
25,26 ರಂದು ಕೈಗಾ ರಿಕ್ರೀಯೆಶನ್ ಕ್ಲಬ್ ವೂ ನಾಟಕದ ಸ್ಪರ್ಧೆ, ಕವನ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿತ್ತು.
ನಾನು ಮತ್ತು ನೀನಾಸಂ ತಿರುಗಾಟದ ವ್ಯವಸ್ಥಾಪಕ ಮಂಜುನಾಥ್, ಮತ್ತು ಧಾರವಾಡ ರಂಗಭೂಮಿ ಕಲಾವಿದ ಗೋಪಾಲ ಉಣಕಲ್ ಎಲ್ಲರೂ ಅಲ್ಲಿ ನಿರ್ಣಾಯಕರಾಗಿ,ಮುಖ್ಯ ಅತಿಥಿಗಳಾಗಿ ಎರಡು ದಿನ ಅಮೂಲ್ಯವಾದ ಸಮಯವನ್ನು ಕಳೆದೇವು.ಅಲ್ಲಿಗೆ ನಮ್ಮನ್ನು ಪ್ರೀತಿಯಿಂದ ಕರೆಯಿಸಿ ನಮಗೆ ಗೌರವವನ್ನು ನೀಡಿದ ಕವಿ,ಲೇಖಕ ,ನಾಟಕಕಾರ ಎ.ಎನ್.ರಮೇಶ್ ಅವರಿಗೆ ಧನ್ಯವಾದ ಹೇಳದೆ ಇರಲಾರೆ.
ವಿವಿಧ ಭಾಷೆಯ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ನಾಟಕಗಳನ್ನು ನೋಡುವ,ಈ ಎಲ್ಲಾ ಭಾಷೆಯ ಕವನಗಳನ್ನು ಕೇಳುವ ಸೌಭಾಗ್ಯ ನನ್ನದಾಯಿತು.
ಹಾಗೆ ಚಿತ್ರಕಲೆ ಸ್ಪರ್ಧೆ ಯಲ್ಲಿ ಕೂಡಾ ಹೈದರಾಬಾದ್, ಬಿಹಾರ, ಚೆನೈ ಕರ್ನಾಟಕದ ಬೇರೆ ಬೇರೆ ಜನರ ಭೇಟಿ ಮನಸ್ಸಿನ ಸಂತಸಕ್ಕೆ ಕಾರಣವಾಯಿತು...
ದಿನದ ಯಾಂತ್ರಿಕ ಬದುಕಿಗೆ ಕೆಲ ದಿನಗಳ ವಿಶ್ರಾಮ ಹೇಳಿ ಅಭಿನಯದ ಮೂಲಕ ತಮ್ಮ ಪ್ರತಿಭೆ ಮೆರೆದು ಜೊತೆಗೆ ತಮ್ಮ ಹರುಷವನ್ನು ನಮ್ಮೊಂದಿಗೆ ಹಂಚಿಕೊಂಡ ಎಲ್ಲಾ ಕಲಾವಿದರ ಮುಖಗಳು ಮಿಂಚಿದವು.
ಈ ಕೈಗಾ ಅಣುವಿದ್ಯುತ್ ಘಟಕದಿಂದ ಹೊರಸೂಸುವ ವಿಕಿರಣದಿಂದ ಈ ಭಾಗದಲ್ಲಿ ಕ್ಯಾನ್ಸರ್ ನಂಥ ಮಾರಕ ಕಾಯಿಲೆಗೆ ಜನ ತುತ್ತಾಗುತ್ತಾರೆ. ಜನ,ಜಾನುವಾರುಗಳಿಗೆ ತುಂಬಾ ತೊಂದರೆಯಾಗುತ್ತದೆ ಈ ಅಣುಸ್ಥಾವರ ಘಟಕ ಬೇಡವೇ ಬೇಡ ಅಂತ ಹೋರಾಟ ಮಾಡಿದ ಪರಿಸರ ಪ್ರೇಮಿಗಳು,ತಜ್ಞರು ಹಾಗೂ ನಾಗರಿಕರಿಗೆ ಯಾವುದೇ ಪರಿಸರ ಹಾನಿ ಆಗುವುದಿಲ್ಲ ಎಂಬ ಭರವಸೆ ನೀಡಿದ ಕೈಗಾ ಅಣುವಿದ್ಯುತ್ ಕೇಂದ್ರ ತನ್ನ ಸೇವೆ ನಿರಂತರ ಸಲ್ಲಿಸುತಿದೆ.ಜೊತೆಗೆ ಸಾಕಷ್ಟು ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿ ರೋಜಿ ರೋಟಿ ನೀಡುತ್ತದೆ.
ಜನಗಳು ಬದಲಾದ ಬದುಕಿಗೆ ಹೊಂದಿಕೊಂಡಿದ್ದಾರೆ. ಸಾಕಷ್ಟು ಜನರು ಹೊರ ರಾಜ್ಯಗಳಿಂದ ಇಲ್ಲಿ ಕೆಲಸ ಮಾಡಲು ಬಂದಿದ್ದಾರೆ...........
ಈ ವಿಷಯ ಇಲ್ಲಿ ಪ್ರಸ್ತಾಪಿಸಲು ಕಾರಣ ಇಷ್ಟೇ ಅಭಿನಯ ಮಾಡಲು ಉತ್ಸಾಹ ತೋರಿದ ಎಲ್ಲಾ ಕಲಾವಿದರು ನೌಕರಸ್ತರು. " ಮುಂಜಾನೆಯಿಂದ ದುಡಿದ ಜೀವಕ್ಕೆ ಒಂದಿಷ್ಟು ವಿರಾಮಬೇಕು ಅದರಲ್ಲಿಯೇ ಸಮಯ ತೆಗೆದು ನಾವು ಅಭ್ಯಾಸವನ್ನು ಮಾಡಿ ಈ ನಾಟಕವನ್ನು ಪ್ರದರ್ಶಿಸಿದೇವು " ಅಂತ ಕಪ್ಪು - ಬಿಳುಪು ಬೇಧ ಭಾವ ವ್ಯವಸ್ಥೆಯ ವಿರುಧ್ಧ ದಂಗೆ ಎದ್ದ ಬೆಂಜಮಿನ್ ನ ಪಾತ್ರವನ್ನು ನಿರ್ವಹಣೆ ಮಾಡಿದ ಕಲಾವಿದ ಹೇಳಿದ......
ಹಾಗೆಯೇ ಹಿಂದಿ ಕವಿತೆ ' ದೊಸ್ತಿ' ಓದಿದ ನಿತೀಶ್ ದ್ವಿವೇದಿ ಮೊದಲನೇ ಸ್ಥಾನವನ್ನು ಪಡೆದರು......
ಗೆಳೆತನದ ಮಧುರ ಸಂಬಂಧ ಎಳೆ ಎಳೆಯಾಗಿ ಬಿಡಿಸಿಟ್ಟರು ನಮ್ಮೆದುರಿಗೆ......ನಾಟಕ ಹಮಾರಾ ವತನ ದೇಶದ ಭಾವ್ಯಕ್ಯತೆ ಮಹತ್ವದ ಮಹತ್ತರ ಸಂದೇಶ ಸಾರಿತು.
ಒಟ್ಟಾರೆ ಎರಡೂ ದಿನ ಭಾರತದ ಎಲ್ಲಾ ಜನರ ಭೇಟಿಯಾದ ಖುಷಿಯಲ್ಲಿ ನಾನು ಧಾರವಾಡಕ್ಕೆ ಬಂದೆನು....
ಈ ಖುಷಿ ಕ್ಷಣಗಳಿಗೆ ಕಾರಣರಾದ ರಮೇಶ ಗುಬ್ಬಿ ಅವರಿಗೆ ಹೃದಯ ಹರಸುತ್ತದೆ....
- ಕನಸು ಕಂಗಳ ಚೆಲುವೆ..
ಕೈಗಾ ರಿಕ್ರೀಯೆಶನ್ ಕ್ಲಬ್ ಸ್ಪರ್ಧೆ
Reviewed by ಕನಸು ಕಂಗಳ ಚೆಲುವೆ
on
November 03, 2017
Rating:
Reviewed by ಕನಸು ಕಂಗಳ ಚೆಲುವೆ
on
November 03, 2017
Rating:


No comments: