ಮೋಡಗಳೇ ನಿಮ್ಮ ಬೆನ್ನು ಹತ್ತಿ......

 

\
ಅದೇನೋ ಏಕೋ ಇಂದು ಇಳಿಹೊತ್ತಿನಲ್ಲಿ ಮೋಡಗಳ ಬೆನ್ನು ಹತ್ತಿ ಮನ ಹೊರಡಲು ತವಕಿಸಿತು...ಮನದಲ್ಲಿ ಬಂದ ತಕ್ಷಣವೇ ರೆಡಿಯಾದೆ ಹೊರಡಲು , ಎಲ್ಲಿಗೆ ಅಂತಿರಾ ? ಧಾರವಾಡದಿಂದ ಬೆಳಗಾವಿ ಕಡೆಗೆ ಬೈಕ್ ಹತ್ತಿ ಹೊರಟೆ...ಒಂದೇ ಎರಡೇ ಕ್ಲಿಕ್ ಕ್ಲಿಕ್ ಅಂತ ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು ಓಡಾಡುವ ಮೋಡಗಳ ಮಧುರಮಯ ಭಾವನೆಗಳನ್ನು.......
ಹಸಿರಿನಿಂದ ಕೂಡಿದ ರಸ್ತೆಯ ಮಗ್ಗುಲಲ್ಲಿ ಬೈಕ್ ನಿಲ್ಲಿಸಿ...



 

ಬನ್ನಿ ಮೋಡಗಳೇ ಬಳಿಗೆ...

ಬನ್ನಿ ಮೋಡಗಳೇ ಬಳಿಗೆ
ಮಳೆ ಹನಿಗಳಾಗಿ ಕೆಳಗೆ
ಏನೇನೋ ಹೇಳುವಾಸೆ ನಿಮಗೆ...

                    ಸುಳಿವ ತಂಗಾಳಿಯಾಗಿ ಮೆಲ್ಲಗೆ
                     ಅತ್ತಿಂದಿತ್ತ ಇತ್ತಿಂದಿತ್ತ ನನ್ನೆಡೆಗೆ
                     ಓಡಾಡುವ ಆಸೆ ಏಕೆ ನಿಮಗೆ....

ಬನ್ನಿ ಮೋಡಗಳೇ ಬಳಿಗೆ
ಎಂತಹ ರಂಗೇರಿದೆ ನೋಡಿ ಬಾನಿಗೆ
ಅದೇನೋ ಮಜವಿದೆ ಒಳಗೆ.....

                    ಬನ್ನಿ ಬಿಳಿ ಮೋಡಗಳೇ ಕೆಳಗೆ
                     ಆಟವಾಡಲು ಇಷ್ಟವೇ ನನ್ನೊಂದಿಗೆ ?
                     ಗುನುಗುನಿಸುವ ಬಾ ಹಕ್ಕಿಗಳ ಕೊರಳಿಗೆ ....

ಬೆಳ್ಳಿ ಮೋಡಗಳೇ ಬನ್ನಿ ಬಳಿಗೆ
ಮದವೇರಿದೆ ಈಗ ಎದೆಗೆ
ಗತ್ತಿನಿಂದ ಕುಣಿಯೋಣವೇ ಮೆಲ್ಲಗೆ ?

                    ಮಧುರ ಸೆಳೆತ ತಂದ ಸಂಜೆಗೆ
                    ವಂದನೆ ಹೇಳಲೇ ನಿಮಗೆ ?
                     ಹಿತವಾಗಿದೆ ರಂಗೇರಿದ ಕಣ್ಣಿಗೆ......

ಬನ್ನಿ ಮೋಡಗಳೇ ಬಳಿಗೆ......

- ಕನಸು ಕಂಗಳ ಚೆಲುವೆ
ಪ್ರೇಮಾ..
  

ಮೋಡಗಳೇ ನಿಮ್ಮ ಬೆನ್ನು ಹತ್ತಿ...... ಮೋಡಗಳೇ ನಿಮ್ಮ ಬೆನ್ನು ಹತ್ತಿ...... Reviewed by ಕನಸು ಕಂಗಳ ಚೆಲುವೆ on November 05, 2017 Rating: 5

No comments:

Contact For Website Designing - Low Rates
Mob: 9448841652
Powered by Blogger.