"ಓ ಸೂರ್ಯನೇ ಒಳಗೆ ಬಾ"

"ಓ ಸೂರ್ಯನೇ ಒಳಗೆ ಬಾ"

ನಿನಗೆಷ್ಟು ಹಂಬಲವೋ ಗೆಳೆಯಾ ಒಳಗೆ ಬರಲು ತೆರೆದ ಕಿಟಕಿಯಿಂದ.
ನೀ ಬರುವೆ ಎಂಬ ವಿಶ್ವಾಸವೇ ಕಳೆದುಕೊಂಡಿದ್ದೆ ನಿನಗೆ ಸ್ವಾಗತಗೈಯುವೆ
ಮನೆಯ ಕರಿಮಸಿ ಮೆತ್ತಿದ ಕಿಟಕಿಯಿಂದ ಬಾ ಒಳಗೆ,
ಹ್ಞೂಂ ಹೌದು !
ನನ್ನ ಮಕ್ಕಳು ಆಟವಾಡುತ್ತಲೇ
ಕಿಟಕಿಯ ಚೌಕಟ್ಟಿಗೆ ಮಸಿ ಬಳೆದಿದ್ದಾರೆ.
ಕ್ಷಮಿಸಿ ಬಿಡು ನನ್ನ
ನಿನ್ನನು ಹೀಗೆ
ಅಭದ್ರತೆಯ ಹೊಸ್ತಿಲಲ್ಲಿ ನಿಂತು
ಸ್ವಾಗತ ಮಾಡುತ್ತಿರುವೆ
ಏನು ಮಾಡಲಿ ಹಣೆಬರಹವೇ ಹೀಗಿದೆಯಲ್ಲ !
ಅಂಗಳದಲ್ಲಿ ಉರಿವ ಬಿಸಿಲಿನಲ್ಲಿ
ನನಗೆ ನಿಲ್ಲಲಾಗುವುದಿಲ್ಲ
ಓ ಸೂರ್ಯನೇ ಓಳಗೆ ಬಾ........

ಕನಸು ಕಂಗಳ ಚೆಲುವೆ
"ಓ ಸೂರ್ಯನೇ ಒಳಗೆ ಬಾ" "ಓ ಸೂರ್ಯನೇ ಒಳಗೆ ಬಾ" Reviewed by ಕನಸು ಕಂಗಳ ಚೆಲುವೆ on October 06, 2018 Rating: 5

2 comments:

  1. ಅರ್ಥಗರ್ಭಿತ ಸಾಲುಗಳು ಆಕರ್ಷಕ, ಕವಿತಾ ಸಂಕಲನ ಬಿಡುಗಡೆ ವಿಡಿಯೊದೊಂದಿಗೆ ಮಾಡಿ

    ReplyDelete
    Replies
    1. ತಮ್ಮ ಸ್ನೇಹಪರ ನುಡಿಗೆ ಧನ್ಯವಾದ ಸರ್

      Delete

Contact For Website Designing - Low Rates
Mob: 9448841652
Powered by Blogger.