ನಸುಕಿನಲಿ - ಕವಿತೆ





ನಸುಕಿನಲಿ
------------------
ರವಿಯ ಹೊಂಗಿರಣವೂ
ಗುನಗುನಿಸುತ ನಸುಕಿನಲಿ
ಭೂರಮೆಯ ಕೆನ್ನೆಗೆ
ಮುತ್ತಿಡಲು ಬಂದಾಗ
ನನ್ನೆದೆಯ ಬಯಲೊಳಗೆ
ನೀ ಬಂದು ನಕ್ಕೆ.......


ಚುಮುಚುಮು ತಂಗಾಳಿಯೂ
ಮಸ್ತಿಯಲಿ ನನ್ನ ಸೋಕಿ
ಅಮಲಿನಲಿ ತೇಲಾಡಿದಾಗ
ನನ್ನೆದೆಯ ಬಯಲೊಳಗೆ
ನೀ ಬಂದು ನಕ್ಕೆ.......


ಬೆಳ್ಳಿ ಮೋಡವೂ
ನನ್ನನು ಪ್ರೀತಿಸಿ
ಸುಮ್ಮನೆ ನನ್ನೊಳಗೆ
ಉದ್ವೇಗ ಹೆಚ್ಚಿಸಿದಾಗ
ನನ್ನೆದೆಯ ಬಯಲೊಳಗೆ
ನೀ ಬಂದು ನಕ್ಕೆ.........


ಮಂಜಿನ ಹನಿವೂ
ನನ್ನನ್ನು ಆಲಿಂಗಿಸಿ
ಬೆಚ್ಚನೆಯ ಉಸುರಿನೊಳಗೆ
ನನ್ನ ಚುಂಬಿಸುವಾಗ
ನನ್ನೆದೆಯ ಬಯಲೊಳಗೆ

ನೀ ಬಂದು ‌ನಕ್ಕೆ............

- ಕನಸು ಕಂಗಳ ಚೆಲುವೆ 
ಪ್ರೇಮಾ
ನಸುಕಿನಲಿ - ಕವಿತೆ ನಸುಕಿನಲಿ - ಕವಿತೆ Reviewed by ಕನಸು ಕಂಗಳ ಚೆಲುವೆ on November 05, 2017 Rating: 5

No comments:

Contact For Website Designing - Low Rates
Mob: 9448841652
Powered by Blogger.