ಮೋಡಗಳ ಮೋಡಿಗೆ
ಮೋಡಗಳಿಗೆ ಏಂತಹ ಮತ್ತೇರಿದೆ ನೋಡು !
ಒಣಪು ಒಯ್ಯಾರದಿ ಸಿಂಗರಿಸಿಕೊಂಡು ಬಂದಿವೆ
ಇಗೋ ಅಲ್ಲಿ ನೋಡು ತಂಗಾಳಿಯೂ ಹಿಂದೆ ಹಿಂದೆ ನಡೆದಿದೆ
ಊರೊಳಗಿನ ಕಿಟಕಿ,ಬಾಗಿಲಗಳು ತೆರೆದುಕೊಂಡಿವೆ
ಅವರ ಮುಖಗಳೆಲ್ಲ ಅರಳಿ ನಗುತಿವೆ
ಹೇಗೆಂದರೆ ಊರಿಗೆ ಹೊಸದಾಗಿ ಅಳಿಯ ಬಂದಂತೆ......
ಮೋಡಗಳು ಬಂದ ಖುಷಿಗೆ ಮರಗಳು ತಲೆಯೆತ್ತಿವೆ
ಈವರೆಗೆ ತಲೆ ತಗ್ಗಿಸಿದ್ದ ಅವು ಯಾರೆಂದು ನೋಡಿವೆ
ಬೀಸುತ್ತಿದ್ದ ಬಿರುಗಾಳಿ ಸುಮ್ಮನೆ ನಿಂತಿದೆ
ಧೂಳು ಮೇಲೇಳದೆ ಶಾಂತವಾಗಿ ತೇಲುತಿದೆ
ಅಳಿಯನ ಕಂಡು ಊರೊಳಗಿನ ಚೆಲುವೆಯರು ನಕ್ಕಂತೆ
ಮೋಡಗಳ ಕಂಡು ಎಲ್ಲಲ್ಲೂ ಶೃಂಗಾರಗೊಂಡಿದೆ......
ಎಲ್ಲರ ಮುಖದಿ ಅಭಿನಂದನಾ ಭಾವವಿದೆ
ಆದರೂ ಉಸರಿವೆ. ಇಷ್ಟದಿನ ಯಾಕೆ ಮರೆತೆ ?
ಮುಂಬಾಗಿಲಲಿ ಹುಡುಗಿಯ ಹೃದಯ ಚಡಪಡಿಸಿದೆ
ಅದಕ್ಕೆ ನಸುನಾಚುತ ಅವಳು ಹೇಳುತ್ತಾಳೆ
ಈ ವರುಷ ನಿನೆಷ್ಟೊಂದು ಸಿಂಗರಿಸಿಕೊಂಡು ಬಂದೆ ?
ಮನ ಕುಣಿದಿದೆ ನಿನ್ನ ಮಧುರ ಮಾತುಗಳಿಗೆ......
ಮೋಡವೇ ನೀ ಬಂದ ಗಳಿಗೆ ಮಿಂಚು ಮಿಂಚಿದೆ
ಕ್ಷಮಿಸು ಬಿಡು ನನ್ನನ್ನು ನೀ ಪ್ರಿಯ , ಮರೆತೆ ಎಂದು ತಿಳಿದೆ.
ನೀ ಮತ್ತೆ ಬಿಟ್ಟು ಹೋಗುವೆಯೆಂದೆನೆಸಿ ಭ್ರಮೆಯಾಗಿದೆ
ಆಸೆಗಳಿರುವ ಕಣ್ಣಲಿ ನೋಡದೋ ಹನಿ ಉದಿರಿವೆ
ಮೋಡವೇ ನಿನ್ನ ಮನೋಹಾರಿ ಚಿತ್ರ ಮನದಲಿ ಮೂಡಿದೆ
ಸಂಜೆ ಗೂಡಿಗೆ ತೆರಳುವ ಹಕ್ಕಿಗಳಲೂ ಚೆಲುವು ಮೂಡಿಸಿದೆ
- ಕನಸು ಕಂಗಳ ಚೆಲುವೆ
ಪ್ರೇಮಾ
( ಕವನ ಸಂಕಲನ ' ಮೌನವೂ ಪಿಸುಗುಟ್ಟಿದಾಗ ...... ' )
ಮೋಡಗಳ ಮೋಡಿಗೆ
Reviewed by ಕನಸು ಕಂಗಳ ಚೆಲುವೆ
on
November 07, 2017
Rating:
Reviewed by ಕನಸು ಕಂಗಳ ಚೆಲುವೆ
on
November 07, 2017
Rating:

No comments: