ಅಮ್ಮ
ಅಮ್ಮಾ ಅನುವುದು
ಎರಡಕ್ಷರದ ಶಬ್ದವೇ
ಆದರೆನೋ ಕಂಪನ ನನ್ನೀ ಗೂಡಲಿ
ಇವಳ ನಗುವದು
ವರ್ಣಿಸಲಾಗದ ಭಾವವೇ
ತುಂಬಿದೆಯೋ ನನ್ನೀ ಗೂಡಲಿ
ಇವಳ ಪ್ರೇಮವದು
ಜಗದೊಳು ಬೆಳಕೇ
ಕತ್ತಲೆದೆಯ ನನ್ನೀ ಗೂಡಲಿ
ಇವಳ ಪ್ರೇರಣೆಯದು
ಸಾಧಿಸಿದ ಕನಸಿಗೇ
ಹೆಗಲಾಗಿರುವುದೋ ಗೆದ್ದ ಗೂಡಲಿ
ಇವಳ ತ್ಯಾಗವದು
ಗುರಿಯ ಮಹಲಿಗೇ
ಮೆಟ್ಟಿಲಾಗಿ ನಿಂತಿದೆಯೋ ನನ್ನೀ ಗೂಡಲಿ
ಇವಳ ಪಾದವದು
ಸ್ಪರ್ಶಿಸಿದ ಗಳಿಗೆಯೇ
ರೋಮಾಂಚಕವದೋ ನನ್ನೀ ಗೂಡಲಿ
ಇವಳ ಗರಿಮೆಯದು
ಹಾಡಿದ ಸಕಲ ಜೀವರಾಶಿಯೇ
ಪುನಿತವಾಯಿತೋ ಜಗದ ಗೂಡಲಿ ....
ವಿಶ್ವ ಅಮ್ಮಂದಿರ ದಿನಾಚರಣೆ ಶುಭಾಶಯಗಳೊಂದಿಗೆ ಪ್ರೇಮಾ ..........
(ನನ್ನ ಮೂರನೇಯ ಕವನ ಸಂಕಲನ ದಿಂದ ಆಯ್ದು ಈ ಕವನ ನಿಮಗೆಲ್ಲಾ ಅರ್ಪಿಸುತ್ತೇನೆ)
ಅಮ್ಮ
Reviewed by ಕನಸು ಕಂಗಳ ಚೆಲುವೆ
on
November 07, 2017
Rating:
Reviewed by ಕನಸು ಕಂಗಳ ಚೆಲುವೆ
on
November 07, 2017
Rating:

No comments: