ರಾಧೆ ಕಾಯುತಿಹಳು
ರಾಧೆ ಕಾಯುತಿಹಳು
ಶ್ಯಾಮ ಬರುವನೆಂದು
ಯಮುನೆಯ ದಡದೊಳು...
ತುಂಬಿ ಕಾತರ ಕಣ್ಣೋಳು
ನೂರು ವ್ಯಾಕುಲ ಎದೆಯೊಳು
ನೋವು ಮಿಡಿತದಲೂ ಕಾದಿಹಳು.......
ಮಾಧವನ ಮಧುರ ಭಾವನೆಗಳೊಳು
ಕನಸಲಿ ಕಳೆದ ಕ್ಷಣಗಳ ನೆನಪಿನೊಳು
ಬಿಂಬಗಳ ಮುಚ್ಚಿ ನೆನೆದಳು....
ಕೃಷ್ಣನಿರದೇ ಕಾನನದೊಳು
ಬೆಂದಳು ರಾಧೆ ವಿರಹದೊಳು
ಮೈಮರೆತಳವಳು ಅವನ ಪ್ರೇಮದೊಳು...
ಸೂರ್ಯಚಂದ್ರ ನಕ್ಕಂತೆ ಬಾನೊಳು
ನೆಲೆನಿಂತ ಮಾಧವ ಮಾನಸದೊಳು
ನಿಜ ಪ್ರೇಮದಲಿ ಬಸವಳಿದಳು.......
ಕರಗಿದ ಕೃಷ್ಣ ಮಥುರೆಯೊಳು
ಕ್ಷಣದಿ ನಿಂತವಳ ಎದುರೊಳು
ಕಂಡವಳ ಕಂಗಳಲಿ ಹನಿಗಳು.....
ಕೃಷ್ಣನ ಕರದಲಿ ಬಂಧಿತಳು
ನಗುತಲಿ ಅವನೆದೆಗೆ ಒರಗಿದಳು
ಮುರಳಿಯ ನಾದದಿ ಜಗವೇ ಮರೆತಳು........
ಕನಸು ಕಂಗಳ ಚೆಲುವೆ
ಪ್ರೇಮಾ.........
ರಾಧೆ ಕಾಯುತಿರುವಳು
Reviewed by ಕನಸು ಕಂಗಳ ಚೆಲುವೆ
on
September 22, 2021
Rating:
Reviewed by ಕನಸು ಕಂಗಳ ಚೆಲುವೆ
on
September 22, 2021
Rating:
No comments: