ಸುರಿಯುವ ಹನಿ ಹನಿ ಮಳೆ
ಆಹಾ! ಎಷ್ಟೊಂದು ಕಳೆ
ಮಂದಹಾಸ ಬೀರಿದಳು ಇಳೆ
ಎಲ್ಲೆಲ್ಲೂ ಕಣ್ಣಿಗೆ ಹಬ್ಬವ ನೀಡುವ ಬೆಳೆ....
ಚಿಗುರೊಡೆದವು ಗಿಡಮರಗಳು ಎಲೆ
ನೋಡು ಸುಂದರ ಎಷ್ಟೊಂದು ಅವನ ಕಲೆ
ಹಕ್ಕಿಗಳ ಚಿಲಿಪಿಲಿ ನಾದದ ಅಲೆ
ಭುವನ ಸುಂದರಿಗೆ ಎಷ್ಟೊಂದು ಈಗ ಬೆಲೆ ?
ಮೇಘರಾಜನು ತಂದ ಈ ಸಂಭ್ರಮ
ತರುವುದು ರೈತರ ಬಾಳಿನಲಿ ಸುಖಲಯ
ಈ ಸಿರಿಯ ನೋಡೆನ್ನ ಹೃದಯ
ಹಾಡಿತೊಂದು ಕವಿತೆ'ಆಯಿತು ಕವಿಮಯ
ಎಲ್ಲರ ಸಂತಸದ ಅಲೆಯ ನೋಡಿ
ಬೇಡಿದೆ ಅವನಲಿ ಹೋಗದಿರಲಿ ಮುಖಗಳೆಲ್ಲ ಬಾಡಿ
ಸಾಗಲಿ ಹೀಗೆ ಜೀವನದ ಗಾಡಿ
ಸದಾ ಇರುವೆಯಾ ?ನೀ ನಮ್ಮ ಜೋಡಿ...
- ಕನಸು ಕಂಗಳ ಚೆಲುವೆ... ಪ್ರೇಮಾ...
ಅವನ ಕಲೆ...
Reviewed by ಕನಸು ಕಂಗಳ ಚೆಲುವೆ
on
January 18, 2018
Rating:
Reviewed by ಕನಸು ಕಂಗಳ ಚೆಲುವೆ
on
January 18, 2018
Rating:

No comments: