ಇಳಿ ಸಂಜೆಯಲ್ಲಿ....



ಇಳಿ ಸಂಜೆಯಲ್ಲಿ
ಕಡಲ ತೀರದಲ್ಲಿ ಕುಳಿತು
ಉಸಿರುತ್ತಲಿದೆ ಮೌನ ಹೃದಯ
ನಿನ್ನೊಡನೆ ಕಳೆದ ಮಧುರ
ಕ್ಷಣಗಳ ಹಿಸಾಬು......


                                             ಇಳಿ ಸಂಜೆಯಲ್ಲಿ
                                             ಬಂಡೆಗಲ್ಲಿನ ಮೇಲೆ ಕುಳಿತು
                                             ಹೇಳ ಬಯಸಿದೆ ಮೌನ ಹೃದಯ
                                             ಅಪ್ಪಳಿಸುವ ಭಾವದ
                                             ಅಲೆಗಳ ಗುದ್ದಾಟ ......

ಇಳಿ ಸಂಜೆಯಲ್ಲಿ
ಕಾಗದದ ದೋಣಿ ತೇಲಿಬಿಟ್ಟು
ಪಿಸುಗುಡುತ್ತದೆ ಮೌನ ಹೃದಯ
ಒಲವ ಭಾವನೆಗಳ
ಕ್ಷಣಕ್ಷಣ ತುಡಿತ.......



ಇಳಿ ಸಂಜೆಯಲ್ಲಿ 
ಕನಸು ಕಂಗಳ ಚೆಲುವೆ ಪ್ರೇಮಾ
ಇಳಿ ಸಂಜೆಯಲ್ಲಿ.... ಇಳಿ ಸಂಜೆಯಲ್ಲಿ.... Reviewed by ಕನಸು ಕಂಗಳ ಚೆಲುವೆ on January 18, 2018 Rating: 5

1 comment:

  1. Chennagide madam...
    Nimmma Kavan Kavite ,Anubhav Kathan , EllavU chennagi Moodibarli,
    Dhanyavadagalu..

    ReplyDelete

Contact For Website Designing - Low Rates
Mob: 9448841652
Powered by Blogger.