ಮಂದಗಾಮಿನಿ
ಸದಾ ನಗುವ ಮುಂಜಾವಿನ
ಚೆಲುವ ಚಕೋರ ರವಿ.....
ರಮ್ಯ ಮನೋಹರ ಸೃಷ್ಟಿಯಲಿ
ಸದಾ ನಗುವ ಸೊಬಗಿನ
ಚೆಲುವಿ ಕೆಂಪನ ಕಮಲಿ........
ಮಂದಾನಿಲ ತಂಪಿನಲಿ
ಸದಾ ಒಲವ ಸವಿಯೊಳಗಿನ
ಸುಧೆಯ ಮಧುರಿಣಿ ಗುಲಾಬಿ..
ನೆನಪುಗಳ ಜೊತಯಲಿ
ಸದಾನಗುತ ಬದುಕಿನೊಳಗಿನ
ಕವಿತೆ ಭಾವಗಳ ನಾನೊಡತಿ..
ಸಾಲುಸಾಲು ವರ್ಣಗಳಲಿ
ಸದಾ ಎದೆ ಬಿಚ್ಚಿ ನಗುವಿನೊಳಗೆ
ಕುಸುರಿ ಹೆಣೆದ ಹುಡುಗಿ ...
ತರುಲತೆಗಳ ಮಡಿಲಲಿ
ಸದಾ ಮಿಂಚುವ ಮಣಿಯೊಳಗಿನ
ಹೂ ಮುಡಿದ ಶೃಂಗಾರದ ಸುಂದರಿ.........
ಹೊಂಗಿರದ ಹೊನ್ನ ಬೆಳಗಲಿ
ಸದಾ ಹರುಷ ಮೀಟುತ
ಗೂಡೊಳಗಿನ
ಭಾವ ಬಿಚ್ಚಿಡುತ ನಿಂತಿಹ ಮಂದಗಾಮಿನಿ........
ಕನಸು ಕಂಗಳ ಚೆಲುವೆ .....
ಮಂದಗಾಮಿನಿ
Reviewed by ಕನಸು ಕಂಗಳ ಚೆಲುವೆ
on
November 07, 2017
Rating:
Reviewed by ಕನಸು ಕಂಗಳ ಚೆಲುವೆ
on
November 07, 2017
Rating:

ಚೆನ್ನಾಗಿದೆ
ReplyDeleteಚೆನ್ನಾಗಿದೆ
ReplyDeleteಧನ್ಯವಾದ ಎಲ್ಲರಿಗೂ
ReplyDelete