ತಾಯಿ ಗೌರವದ ಹಾಡಿದು



ತಾಯಿ ಗೌರವದ ಹಾಡಿದು

ಕೋಟಿ ಕೋಟಿ ಕಂಠಗಳಿಂದ ಹಾಡಿದ ತಾಯಿಯ ಗೌರವದ ಹಾಡಿದು....
ಒಂದಾಗಿದ್ದೇವೆ,ಒಂದಾಗಿರೋಣ
ಭಾರತದ ಸಂತಾನರು ನಾವು..

ಪಂಥ ವಿವಿಧಗಳಾದರೂ ಚಿಂತನೆ ಒಂದೇ
ಪ್ರಾಂತ್ಯ ಗಳು ಬೇರೆಯಾದರೂ
ಮನಸು ಒಂದೇ
ವೇಷಭೂಷಣ  ಭಾಷೆ ಬೇರೆಯಾದರೂ        ದೇಶದ ಸುಂದರತೆ ಒಂದೇ
ಇದನೆಲ್ಲಾ ಒಡೆದೊಡೆದು ನೋಡುವ ಶತ್ರುಗಳು ಬುದ್ದಿ ಮರೆತು ಬಂದಿದ್ದಾರೆ ಎಲ್ಲೊ ಹಿಂದೆ..

ತಿಳುವಳಿಕೆ ಹೇಳೋಣ ತಿಳಿಗೇಡಿಗಳಿಗೆ
ಮಲಗಿರುವ ದೇಶವನ್ನು ಎಬ್ಬಿಸೋಣ
ಶತ್ರುಗಳ ನನಸಾಗದ ಕನಸುಗಳನ್ನು
ಬೇರಿನಿಂದ ಕಿತ್ತೆಸೆಯೋಣ..
ಭಾರತದ ಭಾಗ್ಯವಂತರು ನಾವು
ಧ್ವನಿಗೆ ಧ್ವನಿ ಸೇರಿಸಿ ಕೂಗೋಣ

ಮೇಲು - ಕೀಳೆಂಬ ಭೇದಭಾವ
ದೇಶವನ್ನು ದುರ್ಬಲಗೊಳಿಸಿದೆ
ಹೊರಗಿನಿಂದ ಒಳಗೆ ಆಕ್ರಮಿಸಿ ಕತ್ತಲೆ ಗಹಗಹಿಸಿ ನಗುತಿದೆ
ಭೇದ ಅಳಿಸಿ ಒಳಗಿರುವ ಕತ್ತಲೆ ಹೊಡಿದೊಡಿಸಲು ಬೆಳಕು ಬರುತಿದೆ
ಹೊಸತನದ ಬೆಳಕಿನ ಪುಂಜವನ್ನು
ಜನಮನ ಸ್ವಾಗತಿಸಲಿ ಎಂಬ ಭಾವವಿದೆ...

ದಿಕ್ಕುಗಳ ಹೀಗೆ ಬದಲಿಸೋಣ ಬನ್ನಿ ಜನರು ಮನ ಬದಲಿಸಲು ಅನಿವಾರ್ಯವಾಗಲಿ
ಸ್ವಾವಲಂಬಿ ಸ್ವಾಭಿಮಾನದಿಂದ ಆಕಾಶ ಭೂಮಿಯೂ ಕೂಡ ಎಚ್ಚೆತ್ತುಕೊಳ್ಳಲಿ..
ದೇಶ ಮತ್ತೊಮ್ಮೆ ವೈಭವದ ಶಿಖರವೇರಿ ಪ್ರಗತಿಯ ಪಥದಲಿ ಸಾಗಲಿ..

ಕನಸು ಕಂಗಳ ಚೆಲುವೆ
ಪ್ರೇಮಾ
ತಾಯಿ ಗೌರವದ ಹಾಡಿದು ತಾಯಿ ಗೌರವದ ಹಾಡಿದು Reviewed by ಕನಸು ಕಂಗಳ ಚೆಲುವೆ on November 17, 2017 Rating: 5

No comments:

Contact For Website Designing - Low Rates
Mob: 9448841652
Powered by Blogger.