ತನ್ನೊಳಗೆ ಪಿಸುಗುಟ್ಟಿದಾಗ


ತನ್ನೊಳಗೆ ಪಿಸುಗುಟ್ಟಿದಾಗ
*****

ಮನ ಮುದಗೊಳ್ಳುತ್ತದೆ
ಮುಂಜಾನೆಯ ತಂಗಾಳಿ
ತನು ಸ್ಪರ್ಶಿಸಿದಾಗ...
   
     ಮನ ಹಾಡುತ್ತದೆ
      ತುಂತುರು ಮಳೆಯಲಿ
      ನಿನ್ನ ಬಿಂಬ ಕಂಡಾಗ...

ಆಸೆ ಚಿಗುರುತ್ತದೆ
ಬಾನಿನ ಬಯಲಲಿ
ಕಾಮನಬಿಲ್ಲು ಮೂಡಿಬಂದಾಗ....

       ಉತ್ತರ ಬಯಸುತ್ತದೆ
       ಮುಖ್ಖಾಂ ಮಾಡಿ ನಿನ್ನೆದೆಯಲಿ
       ನನ್ನ ಪ್ರಶ್ನೆ, ಪ್ರೀತಿಸು ಎಂದಾಗ...

ಸನಿಹಕೆ ಸರಿಯುತ್ತದೆ
ಕಪ್ಪು ಮೋಡಗಳಲೂ ಪ್ರೀತಿ
ಚಿಗುರಿ ಹನಿಗಳ ಸುರಿಸಿದಾಗ.....

      ಭರವಸೆ ಬರುತ್ತದೆ
      ನಿನ್ನ ಮಧುರ ಮಾತುಗಳಲಿ
      ನನ್ನ ಕನಸು ನನಸಾದಾಗ......

ತನ್ನೊಳಗೆ ಪಿಸುಗುಟ್ಟುತ್ತದೆ
ಕಾಪಿಟ್ಟ ಕನಸುಗಳ ಎದೆಯಲಿ
ಸುಮ್ಮನೆ ನಿನ್ನ ನೆನಪಾದಾಗ......

      ಕನಸು ಕಂಗಳ ಚೆಲುವೆ
      ಪ್ರೇಮಾ....
ತನ್ನೊಳಗೆ ಪಿಸುಗುಟ್ಟಿದಾಗ ತನ್ನೊಳಗೆ ಪಿಸುಗುಟ್ಟಿದಾಗ Reviewed by ಕನಸು ಕಂಗಳ ಚೆಲುವೆ on November 17, 2017 Rating: 5

No comments:

Contact For Website Designing - Low Rates
Mob: 9448841652
Powered by Blogger.