ಸಖಿ
ಕಣ್ಣಂಚಿನಿಂದ ಜಾರಿದ
ಹನಿಯೊಂದು ಮೆಲ್ಲಗೆ
ಗಲ್ಲದ ಮೇಲೇ ಕುಳಿತು
ಸಖಿಯಳ ಬಿರುಕು ಬಿಟ್ಟ
ತುಟಿಯ ನೋಡುತ್ತದೆ.......
ಪ್ರಿಯನಿಂದ ಬಾರದ
ಸಂದೇಶ ಯಾವುದೊಂದು ಸಣ್ಣಗೆ
ಒಲ್ಲದ ಮನಸೇ ಹಳೆಯಿತು
ಅವಳ ಬದುಕ ಬಿಟ್ಟ
ಕತೆಯ ಜಾಡೇ ಸುಡುತ್ತದೆ..........
ಮನಸ್ಸಿನಿಂದ ಸರಿದ
ಪ್ರಿಯನೊಮ್ಮೆ ಮೆಲ್ಲಗೆ
ಸಲ್ಲದ ನೆಪ ಹಿಡಿದು
ತನ್ನವಳ ಎದೆಗೆ ಕೊಟ್ಟ
ವ್ಯಥೇಯ ಕತೆ ಹೇಳುತ್ತದೆ............
ಉರಿತದಿಂದ ನಲುಗಿದ
ಸಖಿಯನೊಮ್ಮೆ ಮೆಲ್ಲಗೆ
ಗಲ್ಲದ ಮೇಲಿಂದಲೇ ಮುದ್ದಿಸುತ ಹೇಳಿತು
"ಸಖಿ ಬಹಳ ಬೇಡ ಎದೆಗೆ ಗುಟ್ಟ
ಮನಸಾರೆ ಅತ್ತುಬಿಡು ಹಗುರಾಗುತ್ತದೆ"....
ಬೆಟ್ಟದಿಂದ ಧುಮುಕಿದ
ನದಿಯಂತೆ ಕಣ್ಣಿನಿಂದ ಸರಸರನೆ
ಚಿಮ್ಮಿದ ಹನಿಗಳೇ ಮುನಿದು
ಬೆಂದವಳ ಹೃದಯ ಬಿಟ್ಟ
ನೆಲದೊಳಗೆ ಅಡಗಿಕೊಳ್ಳುತ್ತವೆ.......
ಕಣ್ಣಿನಿಂದ ಇಳಿದ
ಹನಿಯೊಂದರ ಕತೆ ಸುಮ್ಮನೆ
ಮರೆತ ಹೊಂಗನಸಿನಂತೆ ಸರಿದು
ಹೆಣ್ಣೊಬ್ಬಳ ಒಡಲೊಳಗೆ ಸುಟ್ಟ
ಕನಸಂತೆ ಸುಟ್ಟು ಬೂದಿಯಾಗುತ್ತದೆ..
ಕನಸು ಕಂಗಳ ಚೆಲುವೆ
ಪ್ರೇಮಾ
ಸಖಿ
Reviewed by ಕನಸು ಕಂಗಳ ಚೆಲುವೆ
on
November 16, 2021
Rating:
Reviewed by ಕನಸು ಕಂಗಳ ಚೆಲುವೆ
on
November 16, 2021
Rating:
No comments: