ಮಿಸ್ ಯ್ಯೂ ಅಪ್ಪಾ

       
   "ಮಿಸ್ ಯ್ಯೂ ಅಪ್ಪಾ "

ಇಂದು ಅಪ್ಪ ಹುಟ್ಟಿದ ದಿನ ,
ಗಾಂಧಿಜಿಯ ಹುಟ್ಟಿದ ದಿನದಂದೇ ಅಪ್ಪ ಹುಟ್ಟಿದ್ದು , " ನನ್ನ ಹುಟ್ಟು ಹಬ್ಬ ಇಡೀ ದೇಶವೇ ಮಾಡುತ್ತದೆ "  ಅಂತ ಮುಗುಳ್ನಗೆ ಬೀರುವ ಅಪ್ಪ ಈಗ ನೆನಪು ಮಾತ್ರ ಬಿಡಿ. ಆದರೆ ಇದ್ದಾಗ " ನೀ ಗಂಡಾಗಿ ಹುಟ್ಟು ಬೇಕಿತ್ತು " ಅಂತ ಸಾವಿರ ಸಲ ಹೇಳುತ್ತಿದ್ದ. ಅದಕ್ಕೆ ಆ ಮಾತುಗಳ ಪುಳಕ ಮಾತ್ರ ಇನ್ನೂ ನನ್ನ ಶರೀರದಲ್ಲಿ ಸಂಚರಿಸುತ್ತದೆ. ಯಾವಾಗಲೂ ನನಗೆ ಗಂಡು ಬದುಕುವ ರೀತಿಯಲ್ಲಿ ಬದುಕುವುದು ಇಷ್ಟ್ , ಗಂಡಸರು ಯಾವುದೇ ಭಯವಿಲ್ಲದೇ ಇರುವುದು , ಏನು ಮಾಡಬೇಕೆಂದು ಅಂತಕೊತಾರೆ ಅದನ್ನು ಮಾಡುವುದು ಅದೇ ರೀತಿ ನಾನು ಅನಕೊಂಡಿದ್ದು ಮಾಡಲು ಎಷ್ಟೇ ಕಷ್ಟ ಆದರೂ ಮಾಡಿಯೇ ತೀರುತ್ತೇನೆ. ಅಪ್ಪ ಅಷ್ಟೇ ಅಲ್ಲ ನನ್ನ ಕಾಕಾ ಕೂಡ " ಪಮ್ಮಿ ಗಂಡಾಗಬೇಕಿತ್ತ ತಪ್ಪಿ ಹೆಣ್ಣಾಗಿ ಹುಟ್ಟ್ಯಾಳ " ಅನ್ನೋ ಮಾತು ಕಿವಿಯಲ್ಲಿ ಗುನುಗುನಿಸಿ ಎದೆಯ ಒಳಗಡೆ ಗಂಡಿನಂತೇ ಬದುಕಲು ಪ್ರಚೋದನೆ ಮಾಡುತ್ತವೆ ನನಗೆ.
ಅಪ್ಪ ಯಾವಾಗಲೂ ನನಗೆ ಪ್ರೀತಿ ಕೊಟ್ಟ ವ್ಯಕ್ತಿ...
ಅಮ್ಮನಿಗಿಂತ ಹತ್ತು ಪಟ್ಟು ಹೆಚ್ಚೇ ಅವನ ಪ್ರೀತಿ ತೂಕ... ನಾನು ಕಲಿಯಬೇಕು ಅನ್ನುವುದಾಗಲಿ , ಸೈಕಲ್ ಹೊಡಿಯಬೇಕೆನ್ನುವುದಾಗಲಿ , ಬಾವಿಯಲ್ಲಿ ಈಜು ಕಲಿಯಬೇಕೆನ್ನುವುದಾಗಲಿ ಅಪ್ಪ , ಕಾಕಾ ಎಲ್ಲರೂ ಹುರುದುಂಬಿಸಿದ್ದರು ಚಿಕ್ಕಂದಿನಿಂದಲೂ ...
ನಾನು ಮೂರು ವರ್ಷದ ಮಗು ಆಗಿದ್ದಾಗ ನನ್ನ ಕಿರಿಯ ಚಿಕ್ಕಪ್ಪ ನಮ್ಮ ಮನೆಯ ಒಂದು ದೊಡ್ಡದಾದ ಕಲ್ಲಿನ ಬಾವಿ ಇತ್ತು ಅದರಲ್ಲಿ ಮೇಲೆನಿಂದ ಎತ್ತಿ ಚೆಲ್ಲಿ ಬಿಡುತ್ತಿದ್ದನಂತೆ ನಂತರ ತಾನು ಹಿಂದೆಯೇ ಬಾವಿಯಲ್ಲಿ ಜಿಗಿದು ನನಗೆ ಪ್ರತಿದಿನ ಈಜುವುದನ್ನು ಕಲಿಸುತ್ತಿದ್ದನಂತೆ ಎಲ್ಲರೂ ಹೇಳತಾ ಇರ್ತಾರೆ.. ಅಮ್ಮ ಅಂತಿರ್ತಾರೆ ನಾನು ಆವಾಗ ಒಟ್ಟೂ ಹೆದರುತ್ತಿರಲಿಲ್ಲವೆಂದು..
ನಾಲ್ಕು ದಿಕ್ಕುಗಳಿಗೂ ನಾಲ್ಕು ವಿಶಾಲವಾದ ಬಾವಿಗಳಿದ್ದವು ನಮ್ಮ ತೋಟದಲ್ಲಿ ಆವಾಗ . ಎರಡು ಬಾವಿಗಳು ಮುಚ್ಚಿಕೊಂಡಿವೆಈಗ , ಆಧುನಿಕತೆಯ ಆಪೋಶನಕ್ಕೊಳಗಾದ ತೋಟ ಅರ್ಧದಷ್ಟು ಭವ್ಯ ಬಂಗಲೆ ಗಳೊಂದಿಗೆ ತಲೆ ಎತ್ತಿ ನಿಂತಿವೆ , ತೆಂಗಿನ ಮರಗಳ ಸಾಲುಗಳಿಂದ ಇಣುಕಿ ನಗುವ ಸೂರ್ಯ ಈಗ ಭವನಗಳ ಮಧ್ಯೆ ಸಿಲುಕಿದಂತೆ ಗೋಚರಿಸುತ್ತಾನೆ , ಗೆಳೆಯರನ್ನೆಲ್ಲ ಕಳೆದುಕೊಂಡ ಉಳಿದ ತೆಂಗಿನ ಮರಗಳು ಸಪ್ಪಗೆ ನಿಂತಿವೆ ಅನಿಸುತ್ತವೆ, ಹಾರರ್ ಸಿನೆಮಾದಲ್ಲಿ ತೋರಿಸುವ ದೊಡ್ಡ ಮರಗಳಂತೆ ಎರಡೂ ಹುಣಸೆ ಮರಗಳು ಹಾಗೇ ಇವೆ ಆದರೆ ನಾವು ಬಾಲ್ಯದಲ್ಲಿ ಅವುಗಳ ಕೆಳಗೆ ಆಟವಾಡಿದಂತೆ ಈಗ ಯಾರೂ ಆಟವಾಡುವುದಿಲ್ಲ . ಈಗಿನ ಮಕ್ಕಳಿಗೆ ನಮ್ಮ ಹಾಗೆ ಬಾಲ್ಯವಿಲ್ಲ , ಎದ್ದು ಕುಳಿತರೆ ಸಾಕು incomplete homework complete ಆಗಿಲ್ಲ ಅನ್ನುವ ಚಿಂತೆ ಅದಕ್ಕೆ ಮತ್ತೆ ಪುಸ್ತಕ ಹಿಡಿದುಕೊಂಡು ಕುಳಿತುಕೊಳ್ಳುತ್ತವೆ . ಮಕ್ಕಳಿಗಿಂತ ತಾಯಿಗೆ ಹೆಚ್ಚು ಚಿಂತೆ ಈಗ ಹೊಂವರ್ಕ ಮಾಡಿಸುವುದು ಅಲ್ಲವೇ  ? ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಿದೆ ಇಷ್ಟೊಂದು ....
ನಾನು ಅಪ್ಪನ ನೆನೆಸುತ್ತಲೇ ಮತ್ತೆಲ್ಲಿಗೋ ಹೋದೆ ಇರಲಿ ಅಪ್ಪನಿಗೆ ಇಂದು ಜನ್ಮ ದಿನ ಅಪ್ಪ ನಮ್ಮೊಂದಿಗೆ ಇಲ್ಲವಾದರೂ ಇವತ್ತು ಅಮ್ಮ ಸಾವಿಗೆ ಪಾಯಸ ಮಾಡಬೇಕಂದಳು ಏನಾದರೂ ಸಿಹಿ ಅಂತ  ಹೀಗೆ ಇದೊಂದು ಭಾವನಾತ್ಮಕ ಬೆಸುಗೆ. ತಮ್ಮನ ಮಗಳು ಐಶ್ವರ್ಯ ಳಿಗೆ ಅಪ್ಪ ತುಂಬಾ ಪ್ರೀತಿ ಅದಕ್ಕೆ ಅವಳು ದೀಪ ಹಚ್ಚಿ ಒಂದೇ ಒಂದು ಹೂ ತಂದು ಫೋಟೊಕ್ಕೆ ಹಾಕಿ  ಮೌನದ ಮೊರೆ ಹೋಗಿದ್ದಾಳೆ...

 ಮಿಸ್ ಯ್ಯೂ ಅಪ್ಪ ..
Happy birthday day to you

ಅಪ್ಪನ  ಮೇಲೊಂದು ಕವಿತೆ ಹಿಂದಿಯಲ್ಲಿ ನಾನು ಬರೆದದ್ದು...

पिता

जिन्होंने अपने स्नेह से
मुझे गोद पर बिठाकर खिलाया
जिनकी प्यारी सी अंगुलियों को पकड़कर जीवन जीना सीखा
वो हैं मेरे जीवनदाता, मेरे पिता ।

जिसने मुझे जीवन की सच्चाई से
मुकाबला करने की हिम्मत दी हैं
जिन्होंने मेरी हर मुश्किलों को
हँसकर मेरे साथ हर कदम रखे।
वो हैं मेरे जीवनदाता,मेरे पिता ।

जिन्होंने अपने बच्चों में
सारी जीवन की पूँजी पायी ।
जिन्होंने खुद जागकर प्यारी सी लोरी सुनाकर हमें सुलाया ।
वो हैं मेरे जीवनदाता, मेरे पिता ।

जिन्होंने मेरी छोटी से छोटी
ख्व़ाहिश को दिल से पूरा किया ।
जिसने मेरी हर हार को चुनोती बना मुझे आगे बढ़ना सिखाया।
वो हैं मेरे जीवनदाता, मेरे पिता ।

मैं ने देखा उनको कभी कभी
बनते एक बार कठोर और मोम भी ।
कभी माँ की भांति हाथों से खिलाते
कभी पेड़ की भांति देते छाँव भी ।
वो हैं मेरे जीवनदाता,मेरे पिता ।

जब भी मैं इनके साथ में रहकर
मेरे हँसीन पलों को गुजारती ।
कठिन परिस्थितियों में भी वो मुझे
हमेशा सुकून से मुस्कुराते हुए फरिश्ता लगते।
वो हैं मेरे जीवनदाता, मेरे पिता ।

जिन्होंने जिंदगी में कभी न भूली
अपने सिध्दांतों पर हर भूमिका निभाना ।
जिसने मुझे दी जिंदगी से
हमेशा लड़ने का हौसला और सीख ।
वो हैं मेरे जीवनदाता, मेरे पिता ।

मेरी हर साँस में प्राणों की तरह बसते है वो मेरी जान भी है मेरे पिता
कैसे कहूँ मैं ? ऐसे होते हैं पिता
जिनका खून मेरी हर नसनस में दौड़ता है ।
वो है मेरे जीवनदाता, मेरे पिता

प्रेमा नडुविनमनि
धारवाड़ कर्नाटक
ಮಿಸ್ ಯ್ಯೂ ಅಪ್ಪಾ ಮಿಸ್ ಯ್ಯೂ ಅಪ್ಪಾ Reviewed by ಕನಸು ಕಂಗಳ ಚೆಲುವೆ on October 01, 2019 Rating: 5

2 comments:

  1. ನೆನಪು ಚಿರಸ್ಥಾಯೀ..

    ReplyDelete
  2. Very nice memories .. all appas are alike.. they want their girl child To be brave and bindas.. poem is good. Congratulations.

    ReplyDelete

Contact For Website Designing - Low Rates
Mob: 9448841652
Powered by Blogger.