ಇನ್ನೇನಿದೆ ಹಂಬಲ ಎನಗೆ


ಪ್ರೇಮಿಗಳ ದಿನದ ಶುಭಾಶಯ....

ಇನ್ನೇನಿದೆ ಹಂಬಲ ಎನಗೆ

ಗೆಳೆಯಾ ಇನ್ನೇನಿದೆ ಹಂಬಲ ಎನಗೆ ಈ ಜಗತ್ತಿನಲ್ಲಿ ?
ನಿನ್ನ ಹೃದಯದ ಒಂದು ಮೂಲೆಯೇ ಸಾಕು...

ಗೆಳೆಯಾ ನನ್ನ ಹತ್ತಿರವೀಗ
ನೆನಪುಗಳ ಬಂಡವಾಳವೇ
ರಾಶಿಯಾಗಿ ತುಂಬಿದೆ
ನೆನಪುಗಳ ಮಡಿಲಲ್ಲೇ
ಮಲಗಿ ಜೋಗುಳ ಕೇಳಬೇಕಿದೆ
ಇನ್ನೇನಿದೆ ಹಂಬಲ ಎನಗೆ
ಈ ಜಗತ್ತಿನಲ್ಲಿ
ನಿನ್ನ ಹೃದಯದ ಒಂದು ಮೂಲೆಯೇ ಸಾಕು....

ಗೆಳೆಯಾ ಸ್ವಪ್ನಗಳೆಲ್ಲ
ದಾರಿ ಕಾದು ದಣಿದು ಬೇಸತ್ತು
ಕೇವಲವೀಗ
ನಿನ್ನ ಬಾಹುಗಳಲ್ಲಿ
ಜೀವ ಬಿಡಲು ಸಜ್ಜಾಗಿವೆ
ಇನ್ನೇನಿದೆ ಹಂಬಲ ಎನಗೆ
ಈ ಜಗತ್ತಿನಲ್ಲಿ
ನಿನ್ನ ಹೃದಯದ ಒಂದು ಮೂಲೆಯೇ ಸಾಕು

ಗೆಳೆಯಾ ನಿನ್ನ ಪ್ರೇಮದ
ಮಧುರ ಸಂದೇಶದ ಸಾಲುಗಳಿಗಾಗಿ
ಹಗಲಿರುಳು
ಕಾದಿರುವ ಮನವಿಲ್ಲಿ
ರಮಿಸಲಾರೆಯಾ ?
ಇನ್ನೇನಿದೆ ಹಂಬಲ ಎನಗೆ
ಈ ಜಗತ್ತಿನಲ್ಲಿ
ನಿನ್ನ ಹೃದಯದ ಒಂದು ಮೂಲೆಯೇ ಸಾಕು....

ಕನಸು ಕಂಗಳ ಚೆಲುವೆ
ಇನ್ನೇನಿದೆ ಹಂಬಲ ಎನಗೆ ಇನ್ನೇನಿದೆ ಹಂಬಲ ಎನಗೆ Reviewed by ಕನಸು ಕಂಗಳ ಚೆಲುವೆ on February 13, 2019 Rating: 5

2 comments:

Contact For Website Designing - Low Rates
Mob: 9448841652
Powered by Blogger.