ಬೆಳಗು
ಯಾವಾಗ ಹಕ್ಕಿಗಳು
ಮಾಧುರ್ಯದಿ ಹಾಡುತ್ತವೆ ,
ಯಾವಾಗ ಹೂಗಳು
ಹರುಷದಿ ಸುಗಂಧ ಪಸರಿಸುತ್ತವೆ ,
ಯಾವಾಗ ಭ್ರಮರಗಳು
ಹೂವನು ಚುಂಬಿಸಿ ಗುಂಯ್ಯಗುಡುತ್ತವೆ ,
ಯಾವಾಗ ನದಿಗಳು
ನಗುತ ಜುಳುಜುಳು ಹರಿಯುತ್ತವೆ,
ಯಾವಾಗ ಮಂಜಿನ ಮುತ್ತುಗಳು
ಹಸಿರೆಲೆಗಳಲಿ ಮಿನುಗುತ್ತವೆ ,
ಆವಾಗ ಇನಿಯಾ ನನ್ನ ನಯನಗಳು
ನಿನ್ನ ಚಿತ್ತಾರ ಬರೆಯುತ್ತವೆ ,
ನನ್ನ ಹೃದಯದಿ ಭಾವನೆಗಳು
ಕನಸಿನ ಕವಿತೆ ಕಟ್ಟುತ್ತವೆ
ಬೆಳಗಿನ ಮುಸುಕಿನ ಕ್ಷಣಗಳು
ರಾತ್ರಿಯ ಪ್ರಿಯನ ನೆನಪಿಸುತ್ತವೆ...
ಕನಸು ಕಂಗಳ ಚೆಲುವೆ
ಪ್ರೇಮಾ
ಯಾವಾಗ ಹಕ್ಕಿಗಳು
ಮಾಧುರ್ಯದಿ ಹಾಡುತ್ತವೆ ,
ಯಾವಾಗ ಹೂಗಳು
ಹರುಷದಿ ಸುಗಂಧ ಪಸರಿಸುತ್ತವೆ ,
ಯಾವಾಗ ಭ್ರಮರಗಳು
ಹೂವನು ಚುಂಬಿಸಿ ಗುಂಯ್ಯಗುಡುತ್ತವೆ ,
ಯಾವಾಗ ನದಿಗಳು
ನಗುತ ಜುಳುಜುಳು ಹರಿಯುತ್ತವೆ,
ಯಾವಾಗ ಮಂಜಿನ ಮುತ್ತುಗಳು
ಹಸಿರೆಲೆಗಳಲಿ ಮಿನುಗುತ್ತವೆ ,
ಆವಾಗ ಇನಿಯಾ ನನ್ನ ನಯನಗಳು
ನಿನ್ನ ಚಿತ್ತಾರ ಬರೆಯುತ್ತವೆ ,
ನನ್ನ ಹೃದಯದಿ ಭಾವನೆಗಳು
ಕನಸಿನ ಕವಿತೆ ಕಟ್ಟುತ್ತವೆ
ಬೆಳಗಿನ ಮುಸುಕಿನ ಕ್ಷಣಗಳು
ರಾತ್ರಿಯ ಪ್ರಿಯನ ನೆನಪಿಸುತ್ತವೆ...
ಕನಸು ಕಂಗಳ ಚೆಲುವೆ
ಪ್ರೇಮಾ
ಬೆಳಗು
Reviewed by ಕನಸು ಕಂಗಳ ಚೆಲುವೆ
on
October 26, 2018
Rating:
Reviewed by ಕನಸು ಕಂಗಳ ಚೆಲುವೆ
on
October 26, 2018
Rating:

ಮೂರೂ ಕವನದಲ್ಲಿ ಉತ್ಕಟತೆ , ತೀವ್ರತೆ, ಅಭಿಲಾಷೆಗಳ ವ್ಯಕ್ತವಾಗಿರುವ ರೀತಿ ಶ್ಲಾಘನಿಯ ಕವಿತಾ ಕೃಷಿ ಮುಂದುವರೆಯಲಿ
ReplyDelete