ಬಿಟ್ಟು ಹೋದ ಕನಸುಗಳೆಲ್ಲ
ಮೂಟೆ ಕಟ್ಟಿ ಅಟ್ಟಕ್ಕೆ ಬಿಸಾಡಿ
ಬಂದಮೇಲೆಯೂ ಕಣ್ಣೊಳಗೆ
ಇನ್ನೂ ಹನಿಗಳು.......
ಮೌನವಾಗಿ ಅತ್ತುಬಿಡಲೊಲ್ಲ
ಸಿಗದ ಪ್ರೀತಿಯ ಬೆಂಬತ್ತಿ ಓಡಿ
ಸಿಗದಿದ್ದರೂ ತನ್ನೊಳಗೆ
ಇನ್ನೂ ಆಸೆಗಳು......
ನಿನ್ನಂತೆ ನಾನೇನು ಕಲ್ಲಲ್ಲ
ಮನಸು ,ಕನಸು ಕೂಡಿ
ಖೈದಿಯಾಗಿದ್ದರೂ ಒಳಗೊಳಗೆ
ಇನ್ನೂ ಬಯಕೆಗಳು.......
ಮರೆಯದ ನೆನಪುಗಳೆಲ್ಲ
ಮತ್ತೊಮ್ಮೆ ಒಲಿದು ಒಡಗೂಡಿ
ಅಲೆದಾಡಿದರೂ ಎದೆಯೊಳಗೆ
ಇನ್ನೂ ಕಲೆಗಳು.....
- ಕನಸು ಕಂಗಳ ಚೆಲುವೆ ಪ್ರೇಮಾ
ಖೈದಿ - ಕವನ
Reviewed by ಕನಸು ಕಂಗಳ ಚೆಲುವೆ
on
February 11, 2018
Rating:
Reviewed by ಕನಸು ಕಂಗಳ ಚೆಲುವೆ
on
February 11, 2018
Rating:

No comments: