ಪ್ರೀತಿಸುವೆ ಬಾ ನಮ್ಮ ಭಾರತ


ಪ್ರೀತಿಸುವೆ  ಬಾ ನಮ್ಮ ಭಾರತ
---------------------------

ಕಣ್ಣಲ್ಲಿ ತುಂಬಿಕೊಂಡು ಸುಂದರ ಕನಸು
ಖುಷಿಯಿಂದ ಹೊರಟಿದ್ದೇವೆ ಮುಂದೆ ನಾವು.
ಶಾಂತಿ ಪ್ರೇಮದ ಬೆಳಕಿನ ದಾರಿಯಲಿ
ಏನಾದರೂ ಮಾಡಲೇಬೇಕೆಂಬ ಛಲದಲಿ.
ಎಲ್ಲರ ಹೃದಯದಲ್ಲೀಗ ನಾವು ಈ ಜ್ಯೋತಿ ಬೆಳಗುತ ಸಾಗುವಾ....
ಪ್ರೀತಿಸುವ ಬಾ ನಮ್ಮ ಭಾರತ


ಎಲ್ಲ ಮನಸುಗಳು ಸೇರಿವೆ ಇಲ್ಲಿ
ದೇಶಕ್ಕಾಗಿಯೇ ತ್ಯಾಗದಿ ಸೇವೆ ಮಾಡಲು.
ಸದಾ ಸಿದ್ದರಾಗಿಯೇ ನಿಂತಿರುವೆವು ನಾವಿಲ್ಲಿ
ಸಹಾಯ ಕೇಳಿದವರಿಗೆ ಹೆಗಲೇ ಕೊಡಲು
ಎಲ್ಲರ ಹೃದಯದಲ್ಲೀಗ ನಾವು ಈ ಜ್ಯೋತಿ ಬೆಳಗುತ ಸಾಗುವಾ...
ಪ್ರೀತಿಸುವ ಬಾ ನಮ್ಮ ಭಾರತ


ಓ ಸಾಥಿ ಬಾ ಈಗ ಎಲ್ಲ ಕೈ ಕೈ ಜೋಡಿಸುವಾ
ಬಿಡಿಸಲಾಗದ ಬಂಧವೊಂದು ಹೊಸದಾಗಿ ಕಟ್ಟುವಾ
ಪಣತೊಟ್ಟು ನಾವೆಲ್ಲರೂ ಒಂದಾಗಿ ಮುನ್ನಡೆಯುವಾ
ಯುವಕರೇ ದೇಶದ ಆಸ್ತಿ , ಸರಿ ದಾರಿ ತೋರಿಸುವಾ
ಎಲ್ಲರ ಹೃದಯದಲ್ಲೀಗ ನಾವು ಈ ಜ್ಯೋತಿ ಬೆಳಗುತ ಸಾಗುವಾ....
ಪ್ರೀತಿಸುವ ಬಾ ನಮ್ಮ ಭಾರತ


ಕವಯಿತ್ರಿ
ಪ್ರೇಮಾ ನಡುವಿನಮನಿ
ಪ್ರೀತಿಸುವೆ ಬಾ ನಮ್ಮ ಭಾರತ ಪ್ರೀತಿಸುವೆ ಬಾ ನಮ್ಮ ಭಾರತ Reviewed by ಕನಸು ಕಂಗಳ ಚೆಲುವೆ on October 05, 2018 Rating: 5

3 comments:

Contact For Website Designing - Low Rates
Mob: 9448841652
Powered by Blogger.