ಹೌದು ನಿಮ್ಮ ಮಗಳಿರುವೆ ನಾನು
ಅಪ್ಪನ ಅರಿಶಿಣ ಬಣ್ಣದ ಪಟಗಾಅವ್ವನ ಸೀರೆಯಂಚಿನ ನಾಚಿಕೆ
ಅಣ್ಣನ ಸ್ವಾಭಿಮಾನ,
ನೆರೆ ಹೊರೆಯವರ ಗೌರವ,
ಹೌದು ನಿಮ್ಮ ಮಗಳಿರುವೆ ನಾನು...
ಸ್ವತಃ ನಾನೇ ಎಡವಿ ಬೀಳುವೆ
ಸ್ವತಃ ನಾನೇ ಮತ್ತೆ ಏಳುವೆ
ಎಲ್ಲರ ಮಾತುಗಳ ಸುಮ್ಮನೆ
ಮೌನವಾಗಿ ಕೇಳುವೆ
ಹೌದು ನಿಮ್ಮ ಮಗಳಿರುವೆ ನಾನು...
ಪ್ರತಿ ಹೆಜ್ಜೆಗೂ ಕಟ್ಟುಪಾಡು
ಹೃದಯ ಹಿಂಡು ಹಿಪ್ಪೆಯಂತೆ ನೋಡು
ಒಳಗೊಳಗೆ ಪುಟಿಯುತ್ತವೆ ಭಾವಗಳು
ಮನಸ್ಸಿಗ ತಿಳಿಸಿ ಹೇಳುವೆ ನೂರು
ಹೌದು ನಿಮ್ಮ ಮಗಳಿರುವೆ ನಾನು...
ಸೀಮಿತ ಸಾಧನೆಯೊಳಗ ಬದುಕುವುದನ್ನ
ಬೇಕು ಬೇಡುಗಳ ಅದುಮಿಟ್ಟುಕೊಳ್ಳುವುದನ್ನ
ಮುಖದ ಮೇಲೆ ಮದಹಾಸ ತರುವುದನ್ನ
ಮರೆತಿಲ್ಲ ನಾನು ಕ್ಷಣ ಕ್ಷಣ ಕಿಲಕಿಲನೆ ನಗುವುದನ್ನ
ಹೌದು ನಿಮ್ಮ ಮಗಳಿರುವೆ ನಾನು...
ಪ್ರತಿಯೊಬ್ಬರ ನೋಟ ತೀಕ್ಷ್ಣವಾಗಿ ನನ್ನ ಮೇಲೆ
ಮರೆತೆನಾದರೂ ತಪ್ಪಾದರೆ! ಕುಟುಕುವ ನುಡಿಗಳೇ,
ನಮ್ಮ ಮನೆಯಲ್ಲೇ ಅಪರಿಚಿತವಾದಂತೆ ಭಾಸ ನನಗೆ
ಇದ್ದರೂ ಇಲ್ಲದಂತೆಯೇ ಒಳಗೆ ಉಗುಳು ನುಂಗಿ ಇರುವೆ ನಿಮ್ಮ ಮುಂದೆ
ಹೌದು ನಿಮ್ಮ ಮಗಳಿರುವೆ ನಾನು....
ಅಪ್ಪನ ಅರಿಶಿಣ ಬಣ್ಣದ ಪಟಗಾ
ಅವ್ವನ ಸೀರೆಯಂಚಿನ ನಾಚಿಕೆ
ಅಣ್ಣನ ಸ್ವಾಭಿಮಾನ,
ನೆರೆ ಹೊರೆಯವರ ಗೌರವ,
ಹೌದು ನಿಮ್ಮ ಮಗಳಿರುವೆ ನಾನು.....
- ಪ್ರೇಮಾ ನಡುವಿನಮನಿ
ಧಾರವಾಡ
ಹೌದು, ನಿಮ್ಮ ಮಗಳಿರುವೆ ನಾನು
Reviewed by ಕನಸು ಕಂಗಳ ಚೆಲುವೆ
on
September 12, 2018
Rating:
Reviewed by ಕನಸು ಕಂಗಳ ಚೆಲುವೆ
on
September 12, 2018
Rating:

No comments: