ನನ್ನನು ಹೀಗೇಕೆ ಕೊಲ್ಲುವಿರಿ



ನನ್ನನು ಹೀಗೇಕೆ ಕೊಲ್ಲುವಿರಿ

ಜಗದ ಜೀವಿಗಳಿಗೆ ಉಸಿರ ನೀಡಿ ಮತ್ತೆ ಮತ್ತೆ ಹೆಣ್ತನವ ಮೆರೆಯುವಳೇ ನಾನು
ಮತ್ತೇಕೆ ನನ್ನ ಕೊಲ್ಲುವಿರಿ..

ಹೆಣ್ಣೆ ಹುಣ್ಣೆಂದು ತಿಳಿದು
ನಿಮಗೆ ಬದುಕನೇ ಕೊಡುವವಳ ಹುಟ್ಟುವಾಗಲೇ 
ಹೀಗೇಕೆ ನನ್ನ ಕೊಲ್ಲುವಿರಿ...

ನೀವೇ ನೋವು ಕೊಡುವುದೆಂದು ಅರಿತರೂ ನಿಮ್ಮ ಕ್ಷಮಿಸಿ, ಕ್ಷಮಯಾಧರಿತ್ರಿ ಪ್ರೀತಿ ಕರುಣಿಸಿದವಳಾದರೂ
ನೀವೇಕೆ ನನ್ನ ಕೊಲ್ಲುವಿರಿ...

ಗಂಡು - ಹೆಣ್ಣೆಂಬ ಜಾತಿ ಬೇಧ ಮರೆತು
ಉಸಿರು ಬಿಟ್ಟಾದರೂ
ಜೀವದಾನ ಮಾಡುವವಳೇ ನಾನಾದರೂ
ನೀವೇಕೆ ನನ್ನ ಕೊಲ್ಲುವಿರಿ...

ಮನೆ - ಮನ ಬೆಳಗುವಳ ಗರ್ಭದಲ್ಲಿಯೇ ಕೊಂದು ದೀಪಗಳನೇ ನುಂದಿಸಿ ಕೊರಗಿ ಸಾಯುವುದೇತಕೆ ? ನನ್ನ ಜೀವ ಉಳಿಸಿರಿ....

ಇಡೀ ವಿಶ್ವವೇ  ಮಡಿಲಲಿ ಹೊತ್ತು 
ಸಾಕುವವಳು ಭೂಮಿ
ನಿನ್ನಂತೆ ಅವಳು ಭಾರವೆಂದರೆ ತನಗೆ ನಿನ್ನ ಜೀವ ಉಳಿದಿತೆ ಕೇಳು
ನಿನ್ನ ಮನೆಯ ಬೆಳಕೆಂದೇ ಕೊಲ್ಲದೇ ನನ್ನ ಜೀವ ಉಳಿಸಿರಿ....

- ಕನಸು ಕಂಗಳ ಚೆಲುವೆ

ನನ್ನನು ಹೀಗೇಕೆ ಕೊಲ್ಲುವಿರಿ ನನ್ನನು ಹೀಗೇಕೆ ಕೊಲ್ಲುವಿರಿ Reviewed by ಕನಸು ಕಂಗಳ ಚೆಲುವೆ on April 29, 2018 Rating: 5

No comments:

Contact For Website Designing - Low Rates
Mob: 9448841652
Powered by Blogger.