ಕವಿತೆ ಗೀಚುವೆ

             ಕವಿತೆ ಗೀಚುವೆ

        ನನ್ನಂತೆ ನಿನ್ನಲಿ
        ಹಲಚಲ್ ನಡೆದಿದೆ
        ಗೆಳೆಯಾ ....

         ಒಪ್ಪಿಗೆ ಕೊಟ್ಟರೆ ನೀ
         ನಿನ್ನ ಗೂಡೊಳಗೆ
         ಕವಿತೆ ಗೀಚುವೆ...

         ನನ್ನ ಬಳಿ ಸುಳಿವ
         ತಂಗಾಳಿಗೆ ಹಾಡಲು
          ಹೇಳುವೆ......

          ಮತ್ತಿನಲ್ಲಿರುವ ನಿನ್ನ
          ಕಂಗಳಿಗೆ ಸಿಹಿಮುತ್ತು
           ನೀಡುವೆ.....

           ನಾಚಿಕೆಯ ಕಣ್ಣಲ್ಲಿ ನೀ
           ಬಿಡಿಸಿಕೊಳ್ಳದಂತೆ
           ಸೆರೆಹಿಡಿಯುವೆ....

            ನನ್ನ ಭಾವಗಳಲಿ ಮಿಂದು
            ಮೈಮರೆಯುವಂತೆ
            ಕಚಗುಳಿ ಇಡುವೆ...

            ಕನಸು ಕಂಗಳ ಚೆಲುವೆ
ಕವಿತೆ ಗೀಚುವೆ         ಕವಿತೆ ಗೀಚುವೆ Reviewed by ಕನಸು ಕಂಗಳ ಚೆಲುವೆ on May 02, 2019 Rating: 5

1 comment:

  1. ಕವನ ಚೆನ್ನಾಗಿದೆ ವಿಡಿಯೋ ಮಾಡಬೇಕು ಇನ್ನೂ ಹೆಚ್ಚು ಸ್ಪರ್ಶಿಸಬಹುದಾಗಿದೆ

    ReplyDelete

Contact For Website Designing - Low Rates
Mob: 9448841652
Powered by Blogger.