ಮುಂಜಾವಿನಲಿ




ಮುಂಜಾವಿನಲಿ
**********

ಮುಂಜಾವಿನಲಿ ಕಣ್ಣೊಳು
ಕನಸ ಪೊಣಿಸುತ ಬರುವ ನಿನ್ನ
ನೆನೆಸುತಲಿ ದಿನಾರಂಭಿಸುವೆ ಚೆಲುವ

ಹಸಿರೆಲೆಗಳಲಿ ನಾಚಿಕೆಯೊಳು
ಮೊಗವರಳಿಸಿ ನಗುವ ನಿನ್ನ
ನೋಡುತಲಿ ಗೆಲುವಾಗುವೆ ಚೆಲುವ

ಹಾಳೆಗಳಲಿ ಬಯಕೆಯೊಳು
ಗೀಚಿಗೀಚಿ ಪದ ಹೆಣೆಯುವ ನನ್ನ
ಕಾಡುತಲಿ ಮುತ್ತಿಡುವೆ ಚೆಲುವ

ಗುನಗುನಿಸುತಲಿ ಎದೆಯೊಳು
ಚಿತ್ತಾರ ಬರೆಯುವ ನಿನ್ನ
ಕರೆಯುತ ನಾಚಿ ಕರಗಿರುವೆ ಚೆಲುವ .....
              ಕನಸು ಕಂಗಳ ಚೆಲುವೆ
ಮುಂಜಾವಿನಲಿ ಮುಂಜಾವಿನಲಿ Reviewed by ಕನಸು ಕಂಗಳ ಚೆಲುವೆ on May 30, 2019 Rating: 5

No comments:

Contact For Website Designing - Low Rates
Mob: 9448841652
Powered by Blogger.