ಇವಳು - ಅವನು
ಇವುಳೋ
ಇವುಳೋ
ಎದೆ ತಗ್ಗುಗಳನ್ನೆಲ್ಲ
ಬಿಸಿಯುಸಿರಲಿ ಏರಿಳಿಸುತ್ತ
ಉನ್ಮತ್ತದಿ ಅಲೆಗಳೆಬ್ಬಿಸುತ್ತ ರಭಸದಿ
ಅವಸರದಿಂದ ಅವನನ್ನು ಬಾಚಿ ತಬ್ಬಿ
ಅವನೊಳಗೆ ಸೇರಿ ತನ್ನ ಮರೆಯಲು ಓಡಿದ್ದಾಳೆ.......
ಅವನೋ
ಅವನೋ
ಎದೆಯ ಬಯಲೊಳಗೆಲ್ಲ
ಕಪ್ಪೆ ಚಿಪ್ಪುಗಳ ಪುಟಿಸುತ್ತ
ಉನ್ಮಾದದಿ ತೀರಕೆ ಅಪ್ಪಳಿಸುತ್ತ ರಭಸದಿ
ಬಂದವಳ ಸರ್ರನೆ ಸೆಳೆದು ಎದೆಗೆ ಅವುಚಿ
ಬಾಹುಗಳ ಬಿಗಿತ ಹೆಚ್ಚಿಸಿ ತನ್ನೊಳಗೆ
ಅವಳ ಹೆಣ್ತನದ ಕೊಬ್ಬು ಕರಗಿಸಿಕೊಳ್ಳಲು
ಸಜ್ಜಾಗಿದ್ದಾನೆ..........
ಕನಸು ಕಂಗಳ ಚೆಲುವೆ
ಪ್ರೇಮಾ,.
ಇವಳು - ಅವನು
Reviewed by ಕನಸು ಕಂಗಳ ಚೆಲುವೆ
on
October 09, 2018
Rating:
Reviewed by ಕನಸು ಕಂಗಳ ಚೆಲುವೆ
on
October 09, 2018
Rating:

Abba...shringara rasa tumbide
ReplyDeleteಧನ್ಯವಾದ
ReplyDeleteಧನ್ಯವಾದ
ReplyDelete