ಕಾಯುತಿರುವೆ

ಕಾಯುತ್ತಿರುವೆ

ಇರುಳ ಕತ್ತಲಲ್ಲಿ ಸುರಿವ ಮಳೆಯ ಜೊತೆಗೆ ಗರಿಗೆದರಿದ ಹೊಂಗನಸುಗಳು.ಕಾಣದಿದ್ದರೂ ಕಂಡಂತೆ ಖುಷಿ ಪಡುವ ಮನಸ್ಸಿಗೆ ಕನಸಿನ ಬೆಂಬಲವೇ ಬಲವಾದ ಕಾರಣ.ಆಗೊಮ್ಮೆ ಈಗೊಮ್ಮೆ ಸಿಟ್ಟಿನಿಂದ ಗುಡುಗು ಅಪ್ಪಳಿಸುವ ಮುನ್ನ ಮಿಂಚುವ ಆ ಬೆಳಕು ಮಂಕಾದ ನನ್ನ ಕನಸುಗಳಿಗೆ ಅವನ ನೆನಪಿನ ಬಣ್ಣ ಬಳಿಯುತ್ತಿತ್ತು.ಬೇಡವೆಂದ ತಕ್ಷಣ ಈ ಬದುಕ ಉಸಿರು ನಿಲ್ಲುವುದಿಲ್ಲ.ಬದಲಾಗಿ ಹೇಗಾದರೂ ಸರಿಯೇ ಬದುಕಿಯೇ ತೀರುತ್ತೇನೆಂಬ ಭಂಡತನ ಬರುತ್ತದೆ ಅದಕ್ಕೆ.ಮನಸ್ಸಿಗೆ ಹಿಂಸೆ ಕೊಡುವ ಜನರ ಮಧ್ಯೆ ಇರುವ ಬದಲು ಕಾಣದ ಕತ್ತಲಲ್ಲಿ ಒಂಟಿತನದ ಕಲ್ಪನೆಯ ಖುಷಿಯೇ ಚೆಂದವೆನಿಸುತ್ತದೆ.......ಒಂದೊಂದು ಸಲ.
  ಕೆಲವೊಂದು ಸಾರಿ ನಾನು ಬೆಳಕಿಗೆ ಬೆನ್ನು ಮಾಡಿ ಕತ್ತಲ ಕಡೆಗೆ ಮುಖ ಮಾಡುವುದನ್ನು ಕಲಿತಿದ್ದೇನೆ.ನನ್ನ ಜೀವಕ್ಕೆ ಆದಿ ಅಂತ್ಯ ತಿಳಿಯದಾಗಿದೆ.ಕಾಣದ ದಾರಿಗೆ ಕತ್ತಲಲ್ಲೇ. ಹೆಜ್ಜೆ ಹಾಕುವಂತೆ ಬದುಕು ಸಾಗುತ್ತಿದೆ.ನನ್ನ ಏಕಾಂಕಿ ಬದುಕಿಗೆ ಹೇಳದೆ ಕೇಳದೆ ಜೊತೆಯಾಗಿ ಬಂದು ಕಾರಣವಿಲ್ಲದೇ ದೂರಾದ ಅವನಿಗಾಗಿ ಕಾಯುತ್ತಿರುವೆ.........

ಕನಸು ಕಂಗಳ ಚೆಲುವೆ

      ಪ್ರೇಮಾ....................... .
ಕಾಯುತಿರುವೆ ಕಾಯುತಿರುವೆ Reviewed by ಕನಸು ಕಂಗಳ ಚೆಲುವೆ on October 07, 2018 Rating: 5

9 comments:

Contact For Website Designing - Low Rates
Mob: 9448841652
Powered by Blogger.