ಮನ #ಕವಿತೆ#

                  ಮನ
                -----------

ನಿನ್ನ ಬರುವಿಗಾಗಿ ಕಾತರಿಸಿ
ಬಸವಳಿದ ನನ್ನ
ನೇತ್ರ ಬಿಂಬಗಳಲಿ
ನಿನ್ನ ನೋಡಿದಾಗ 
ಮನ ತುಸು ಪಿಸುಗುಡುತ್ತದೆ.

ನಿನ್ನ ಅಪ್ಪಣೆಗಾಗಿ  ಕಾಯದೇ
ನಿನ್ನ ಕನಸಿನ ಗೂಡಲಿ
ಚಿತ್ತಾರವಾಗಿ ಮೂಡುವ ನನ್ನ ಬಯಕೆಯಾಗಿ 
ಭರವಸೆ ತುಸು ನುಗ್ಗುತ್ತದೆ.

ನೀನು ನನಗಾಗಿ ಹೊಂಗನಿಸಿನ
ಮನೆಯ ಸಿಂಗರಿಸಿ
ಭಾವಗಳ    ಜೀವವಾಗಿ   
ಮೂರ್ತಿಯ ಶಿಲೆಯಾದಾಗ
ಎನ್ನ ಮನ ತುಸು ನಾಚುತ್ತದೆ..

ಕನಸು ಕಂಗಳ ಚೆಲುವೆ
ಮನ #ಕವಿತೆ#             ಮನ  #ಕವಿತೆ# Reviewed by ಕನಸು ಕಂಗಳ ಚೆಲುವೆ on November 01, 2018 Rating: 5

2 comments:

Contact For Website Designing - Low Rates
Mob: 9448841652
Powered by Blogger.